ಮಣೂರು ಮಹಾಲಿಂಗೇಶ್ವರ ದೀಪೋತ್ಸವ ಸಂಪನ್ನ -karavalivani
ಕೋಟ: ಶ್ರೀ ಕ್ಷೇತ್ರ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.ಆ ಪ್ರಯುಕ್ತ ವಿಶೇಷ ರಂಗಪೂಜೆ, ಬಲಿ ಉತ್ಸವ,ದೇವಳದ ಪುಷ್ಕರಣಿಯಲ್ಲಿ ತೇಪೋತ್ಸವ , ಭಕ್ತಾಧಿಗಳಿಂದ ದೀಪ ಬೆಳಗಿಸುವ ಹಾಗೂ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರಿಂದ ಭಕ್ತಗಾಯನ ನಡೆಯಿತು.
ಧಾರ್ಮಿಕ ಪೂಜಾ ಕಾರ್ಯದ ನಂತರ ಪನ್ಯಾರ ,ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಶ್ರೀ ದೇವಳದ ಅರ್ಚಕ ಗಣೇಶ್ ಐತಾಳ್ ,ಗರಿಕೆ ಮಠದ ರಾಮ ಅಡಿಗ,ರವಿ ಐತಾಳ್,ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ,ಸದಸ್ಯರಾದಅಶೋಕ ಶೆಟ್ಟಿ,ದಿನೇಶ್ ಆಚಾರ್ಯ, ಕೃಷ್ಣ ದೇವಾಡಿಗ,ಸುಫಲ ಶೆಟ್ಟಿ, ಅಚ್ಯುತ್ ಹಂದೆ,ಜಿ.ಬಾಬು,ದಿವ್ಯ ಪ್ರಭು ,ಕೋಟ ಗ್ರಾಮಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಅರುಣಾಚಲ ಮಯ್ಯ,ರಾಧಕೃಷ್ಣ ಉರಾಳ,ಎಮ್ ಎನ್ ಮಧ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು.
