Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ಎಂಗೇಜ್​ಮೆಂಟ್

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ಎಂಗೇಜ್​ಮೆಂಟ್ 


 15 ಭಾಷೆಗಳಲ್ಲಿ ಬರೆದಿರುತ್ತದೆ 

 

ಉಡುಪಿ, ಡಿಸೆಂಬರ್​​ 16: ಸಮಯ ಅಭಾವದಿಂದ ಅಥವಾ ಕಚೇರಿಯಲ್ಲಿ ರಜೆ ಸಿಗಲ್ಲ ಎನ್ನುವ ಕಾರಣಕ್ಕೋ ಸಂಬಂಧಿಕರ ಮನೆಯ ಶುಭ ಕಾರ್ಯಕ್ರಮಗಳಿಗೆ ಹೋಗದಿರೋದು ಇತ್ತೀಚೆಗೆ ಮಾಮೂಲು. ಕೆಲವೊಮ್ಮೆ ತಮ್ಮ ಸಹೋದರ ಸಹೋದರಿಯರ ಮದುವೆಯಂತಹ ಕಾರ್ಯಗಳಿಗೂ ಅನಿವಾರ್ಯವಾಗಿ ಕೆಲವರು ಗೈರಾದ ಉದಾಹರಣೆಗಳಿವೆ. ಆದ್ರೆ ಉಡುಪಿಯಲ್ಲೊಂದು ಭಾರಿ ಅಪರೂಪದ ಪ್ರಸಂಗ ನಡೆದಿದೆ. ನಿಶ್ಚಿತಾರ್ಥಕ್ಕೆ ಬರಲು ರಜೆಯ ಅಭಾವ ಹಿನ್ನೆಲೆ ಆನ್​​ಲೈನ್​​ನಲ್ಲೇ ಎಂಗೇಜ್​​ಮೆಂಟ್​​ ನಡೆಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಸುಹಾಸ್ ಎಸ್. ಮತ್ತು ಉಡುಪಿ ನಿವಾಸಿ ಕಾತ್ಯಾಯಿನಿ ಅವರ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಸದ್ಯ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್​​ಗೆ ಕಾರ್ಯಕ್ರಮಕ್ಕೆ ಬರಲು ಕಚೇರಿಯ ರಜೆಯ ಸಮಸ್ಯೆ ಆಗಿದೆ. ಹೀಗಾಗಿ ಆನ್​​ಲೈನ್​​ ಮೂಲಕ ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಿಶ್ಚಿತಾರ್ಥ ನಡೆಸಲಾಗಿದೆ. ಕ್ಯಾಮರಾಗೆ ಉಂಗುರ ತೋರಿಸಿ ಯುವಕ ಮತ್ತು ಯುವತಿ ಉಂಗುರ ಧರಿಸಿದ್ದಾರೆ. ನೆರೆದಿದ್ದವರು ಆರತಿ ಬೆಳಗಿ, ಅಕ್ಷತೆ ಹಾಕಿ ಇವರನ್ನು ಆಶೀರ್ವದಿಸಿದ್ದಾರೆ. ಇನ್ನು ನಿಶ್ಚಿತಾರ್ಥ ನಡೆದ ಸಮಯ ಉಡುಪಿಯಲ್ಲಿ ಬೆಳಿಗ್ಗೆ ಆಗಿದ್ದರೆ, ಕೆನಡಾದಲ್ಲಿ ಮಧ್ಯರಾತ್ರಿ ಆಗಿತ್ತು 



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close