Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಫೆಬ್ರವರಿ 14ಕ್ಕೆ ಬ್ರಹ್ಮಾವರದಲ್ಲಿ ಅಭಿಮತ ಸಂಭ್ರಮ; ಪೂರ್ವಭಾವಿ ಸಭೆ

ಫೆಬ್ರವರಿ 14ಕ್ಕೆ ಬ್ರಹ್ಮಾವರದಲ್ಲಿ ಅಭಿಮತ ಸಂಭ್ರಮ; ಪೂರ್ವಭಾವಿ ಸಭೆ 




 ಹುಲಿ 

 

 ಕೋಟ: ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಯೋಜಿಸುವ ಅಭಿಮತ ಸಂಭ್ರಮ 2026 ರ ಫೆಬ್ರವರಿ ತಿಂಗಳ ಹದಿನಾಲ್ಕನೇ ತಾರೀಕಿನಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎನ್ನುವುದಾಗಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ವಡ್ಡರ್ಸೆಯಲ್ಲಿ ನಡೆದ ಅಭಿಮತ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು. 


ಅಭಿಮತ ಸಂಭ್ರಮ ಎನ್ನುವುದು ರಾಜ್ಯದಲ್ಲೇ ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ಕಾರ್ಯಕ್ರಮದ ಆಯೋಜನೆಯನ್ನ ಅಧ್ಯಯನ ದೃಷ್ಟಿಯಿಂದಲೇ ವೀಕ್ಷಿಸಲು ಹಲವು ಸಂಘಟಕರು ಆಗಮಿಸುತ್ತಾರೆ ಎಂದು ಡಾ. ಜಗಧೀಶ್ ಶೆಟ್ಟಿ ಅಭಿಪ್ರಾಯ ಪಟ್ಟರು.


ಪ್ರತೀ ವರ್ಷವೂ ಜನಸೇವಾ ಟ್ರಸ್ಟ್  ಸಮಾಜದ ಶ್ರೇಷ್ಠ ಸಾಧಕರಿಗೆ ಕೊಡಮಾಡುವ ಯಶೋಗಾಥೆ ಪುರಸ್ಕಾರ ಮತ್ತು ‘ಕೀರ್ತಿ ಕಲಶ’ ಪುರಸ್ಕಾರದ ಆಯ್ಕೆಯ ಕುರಿತು ಟೀಮ್ ಅಭಿಮತದ ಸದಸ್ಯರಿಂದ ಸೂಚನೆಗಳನ್ನು ಪಡೆಯಲಾಯಿತು. 

 

ಕಾರ್ಯಕ್ರಮದಲ್ಲಿ ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ ಸಂಯೋಜಕರಾದ ಉದಯ್ ಪಡುಕರೆ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ರಾಜೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ  ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.

 ಟೀಮ್ ಅಭಿಮತ ಸಹ ಸಂಚಾಲಕ ಶರತ್ ಶೆಟ್ಟಿ ವಡ್ಡರ್ಸೆ ಸ್ವಾಗತಿಸಿ, ಟೀಮ್ ಅಭಿಮತದ ಪ್ರಮುಖರಾದ ಸಂತೋಷ್ ಶೆಟ್ಟಿ ಕೊತ್ತಾಡಿ ಧನ್ಯವಾದ ಸಮರ್ಪಸಿ ಕಾರ್ಯನಿರ್ವಣಧಿಕಾರಿ ರಾಘವೇಂದ್ರ ರಾಜ್ ಸಾಸ್ಥಾನ ಕಾರ್ಯಕ್ರಮ ನಿರೂಪಿಸಿದರು..



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close