ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್ಕೊಟ್ಟ ಯುವತಿ

ಚಿಕ್ಕಮಗಳೂರು, www.webnewskannada.com
ಡಿಸೆಂಬರ್ 12: ಲವರ್ಗೆ ಕೈಕೊಟ್ಟು ಬೇರೆ ಯುವತಿ ಜೊತೆಗೆ ಯುವಕ ಮದುವೆಯಾದ ಹಿನ್ನಲೆ ಮೋಸ ಹೋದ ಯುವತಿ ಮದುವೆ ಮಂಟಪದಲ್ಲಿ ರಂಪಾಟ ನಡೆಸಿರುವ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಳೆದ 10 ವರ್ಷದಿಂದ ಶರತ್ ಎಂಬಾತನನ್ನು ಯುವತಿ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಆತ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.ಮದುವೆ ಮಂಟಪದಲ್ಲೇ ತನ್ನ ವಿವಾಹವಾಗು ಎಂದು ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ಪಟ್ಟು ಹಿಡಿದ್ದಾಳೆ. ಇನ್ನು, ಶರತ್ ಮೋಸ ಮಾಡಿರುವ ವಿಚಾರವಾಗಿ 8 ತಿಂಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ನಿನ್ನೆ ಶರತ್ ಮನೆಯ ಮುಂದೆ ಏಕಾಂಗಿ ಹೋರಾಟ ಕೂಡ ಮಾಡಿದ್ದಳು. ಅದರ ಮುಂದುವರಿದ ಭಾಗವಾಗಿ ಇಂದು ಮದುವೆ ಮಂಟಪಕ್ಕೆ ಬಂದು ನೊಂದ ಯುವತಿ ರಂಪಾಟ ನಡೆಸಿದ್ದಾಳೆ. ಮದುವೆ ಮಂಟಪದೊಳಗೆ ಧರಣಿ ಕುಳಿತಿದ್ದಾಳೆ.ಆದರೆ, ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಿಗದಿಯಾದ ಮುಹೂರ್ತದಲ್ಲಿ ವಿವಾಹ ಕಾರ್ಯ ಮುಗಿದಿದೆ. ಆದರೂ ಯುವತಿ ಇದೇ ಮಂಟಪದಲ್ಲಿ ತನ್ನನ್ನು ಆತ ಮದುವೆಯಾಗಬೇಕು ಎಂದು ಪಟ್ಟು ಹಿಡಿದ್ದಾಳೆ. ಜೊತೆಗೆ ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದ್ದಾಳೆ. ನಾನು ಬರುವ ಮೊದಲೇ ಮದುವೆಯಾಗಿದೆ. ನನ್ನ ಬಳಿ ಹಣ ಕೊಡ್ತೀವಿ ಇಲ್ಲಿಂದ ಹೋಗು ಅಂದ್ರು. ನನಗೆ ಯಾವುದೇ ಹಣ ಬೇಡ, ಆತ ನನ್ನ ಮದುವೆ ಆಗಬೇಕಷ್ಟೇ ಎಂದು ಯುವತಿ ತಿಳಿಸಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

.jpg)