ಪ್ರಜ್ವಲ್ ರೇವಣ್ಣ ದುಷ್ಕೃತ್ಯಕ್ಕೆ ಪ್ರಬಲ ಸಾಕ್ಷಿಗಳು
ಅತ್ಯಾಚಾರದ ಅಪರಾಧಿ ಪ್ರಜ್ವಲ್ ರೇವಣ್ಣ ಸಂತ್ರಸ್ತೆಯ ಜತೆ ತಾನು ನಡೆಸಿದ ಲೈಂಗಿಕ ಕ್ರಿಯೆಯ ವಿಡಿಯೊ ರೆಕಾರ್ಡ್ ಮಾಡಿದ್ದಾನೆ
ಅತ್ಯಾಚಾರದ ಅಪರಾಧಿ ಪ್ರಜ್ವಲ್ ರೇವಣ್ಣ ಸಂತ್ರಸ್ತೆಯ ಜತೆ ತಾನು ನಡೆಸಿದ ಲೈಂಗಿಕ ಕ್ರಿಯೆಯ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಆ ವಿಡಿಯೋ ಇಡ್ಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೇ, ಅಸ್ತ್ರವಾಗಿ ಬಳಸಿ ದುಷ್ಕೃತ್ಯ ಮೆರೆದಿದ್ದಾನೆ. ಹೀಗಾಗಿ, ಗರಿಷ್ಠ ಮತ್ತು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯಕ್ಕೆ ಮನವರಿಕೆ ವಾದ ಮಂಡಿಸಿದ್ದರು. ಬಳಿಕ ನಿನ್ನೆ ಸಂಜೆ ಶಿಕ್ಷೆಯ ಪ್ರಮಾಣವನ್ನು ನಿಗದಿಗೊಳಿಸಿ, ತೀರ್ಪು ಪ್ರಕಟಿಸಿದರು