ಪಡಿತರ ಚೀಟಿದಾರರಿಗೆ ಸರ್ಕಾರ ಗುಡ್ ನ್ಯೂಸ್-webnews kannada
ಪಡಿತರ ಚೀಟಿದಾರರಿಗೆ ಸರ್ಕಾರ ಗುಡ್ ನ್ಯೂಸ್-webnews kannada
ರಾಜ್ಯದ ಬಿಪಿಎಲ್ ಪಡಿತರಿಗೆ ಈಗಾಗಲೇ ಸರ್ಕಾರ 10 ಕೆಜಿ ಅಕ್ಕಿ ವಿತರಿಸುತ್ತಿದೆ.
ರಾಜ್ಯದ ಬಿಪಿಎಲ್ ಪಡಿತರಿಗೆ ಈಗಾಗಲೇ ಸರ್ಕಾರ 10 ಕೆಜಿ ಅಕ್ಕಿ ವಿತರಿಸುತ್ತಿದೆ. ಇದೀಗ ಅದರ ಜೊತೆಗೆ ಇನ್ನು ಮುಂದೆ ಬೇಳೆ, ಎಣ್ಣೆ ಸಹ ಕೊಡುವ ಚಿಂತನೆ ನಡೆಯುತ್ತಿದೆ ಎಂದು ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು, ಪಡಿತರದಾರರಿಗೆ ಇನ್ನುಮುಂದೆ ಅಕ್ಕಿ ಜೊತೆಗೆ ಬೇಳೆ, ಎಣ್ಣೆ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಕಾಳಸಂತೆಯಲ್ಲಿ ಪಡಿತರ ವಿಚಾರವಾಗಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

