ಬಾಂಧವ್ಯ ಫೌಂಡೇಶನ್ ನಿಂದ ಸಮವಸ್ತ್ರ ವಿತರಣೆ ಮತ್ತು ಶಿಕ್ಷಣೋಲ್ಲಾಸ ತರಬೇತಿ
ಬಾಂಧವ್ಯ ಫೌಂಡೇಶನ್ ನಿಂದ ಸಮವಸ್ತ್ರ ವಿತರಣೆ ಮತ್ತು ಶಿಕ್ಷಣೋಲ್ಲಾಸ ತರಬೇತಿ
ಇಂದು ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆ ಮಟಪಾಡಿ ಬ್ರಹ್ಮಾವರ ಶಾಲಾ ಮಕ್ಕಳಿಗೆ ಬಾಂಧವ್ಯ ಫೌಂಡೇಶನ್ ವತಿಯಿಂದ 85 ಮಕ್ಕಳಿಗೆ ಟ್ರಾಕ್ ಸಮವಸ್ತ್ರ ನೀಡಲಾಯಿತು.
ಇಂದು ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆ ಮಟಪಾಡಿ ಬ್ರಹ್ಮಾವರ ಶಾಲಾ ಮಕ್ಕಳಿಗೆ ಬಾಂಧವ್ಯ ಫೌಂಡೇಶನ್ ವತಿಯಿಂದ 85 ಮಕ್ಕಳಿಗೆ ಟ್ರಾಕ್ ಸಮವಸ್ತ್ರ ನೀಡಲಾಯಿತು. ಬಾಂಧವ್ಯ ಫೌಂಡೇಶನ್ ನ ರೂವಾರಿ ದಿನೇಶ್ ಬಾಂಧವ್ಯ ಯೋಜನೆ ನೆಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು ಬ್ರಹ್ಮಾವರ ಬಿ ಆರ್ ಪಿ /ಬಿ ಆರ್ ಸಿ ಉದಯ್ ಕೋಟರವರು ತರಬೇತಿ ಕಾರ್ಯಗಾರ ನೆಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಕಲಿಬೈಲ್ ನ ಅಭಿಜಿತ್ ಪಾಂಡೇಶ್ವರ, ಬ್ರಹ್ಮಾವರ ಪೊಲೀಸ್ ಠಾಣೆ ASI ಜಯಕರ್ ಐರೋಡಿ, ಕರ್ನಾಟಕ ಡ್ರೈವರ್ ವೇಲ್ಫರ್ ನ ರಾಜ್ಯ ಕಾರ್ಯದರ್ಶಿ ಕೆ ಸಂತೋಷ್ ನಾಯಕ್, ಶಾಲಾಭಿವೃದ್ಧಿ ಸಮಿತಿಯ ರಾಜರಾಮ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯರಾದ ಸುಧಾಕರ್ ಶೆಟ್ಟಿ, ಬಾಂಧವ್ಯ ಫೌಂಡೇಶನ್ ಸದಸ್ಯೆ ಉಷಾ ಬಸವರಾಜ್ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಶೇಖರ್ ಪೂಜಾರಿ ಹಾಗೂ ಮಕ್ಕಳ ಪೋಷಕರು ಮತ್ತು ಶಿಕ್ಷಕರ ವೃಂದ ಮತ್ತಿತ್ತರು ಉಪಸ್ಥಿತರಿದ್ದರು, ಶಾಲಾ ಮುಖ್ಯೋಧ್ಯಾಯರಾದ ಶಿವರಾಮ್ ಶೆಟ್ಟಿ ನಿರೂಪಣೆ ಜೊತೆಗೆ ಸ್ವಾಗತಿಸಿದರು ಶಾಲಾ ಶಿಕ್ಷಕಿ ಶ್ರೀಮತಿ ದಿವ್ಯಾ ಧನ್ಯವಾದ ಸಮರ್ಪಿಸಿದರು.

