Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

Viral News: 4 ಕಾಲಿನೊಂದಿಗೆ ಜನಿಸಿದ 9 ತಿಂಗಳ ಮಗು

Viral News: 4 ಕಾಲಿನೊಂದಿಗೆ ಜನಿಸಿದ 9 ತಿಂಗಳ ಮಗು 

 

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮಗುವೊಂದು ನಾಲ್ಕು ಕಾಲುಗಳು ಮತ್ತು ಬೆನ್ನುಮೂಳೆಯ ಮೇಲ್ಭಾಗದಲ್ಲಿ ಭಾರಿ ಊತದೊಂದಿಗೆ ಜನಿಸಿತ್ತು. ತಮ್ಮ ಮಗುವಿನ ವಿಕಾರ ರೂಪವನ್ನು ಕಂಡು ಪೋಷಕರು ಆತಂಕಗೊಂಡಿದ್ದರು. ಹೆಣ್ಣು ಮಗುವಿನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ತಮ್ಮ ಮಗುವನ್ನು ಮಾರ್ಚ್ 6 ರಂದು ರಿಷಿಕೇಶದ ಏಮ್ಸ್‌ಗೆ ಕರೆದೊಯ್ದಿದ್ದಾರೆ. ನಾಲ್ಕು ಕಾಲುಗಳೊಂದಿಗೆ ಜನಿಸಿದ್ದ 9 ತಿಂಗಳ ಮಗುವಿಗೆ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅಸಹಜ ಸ್ಥಿತಿಯಲ್ಲಿದ್ದ ಎರಡು ಕಾಲನ್ನು ರಿಷಿಕೇಶದ ಏಮ್ಸ್ ವೈದ್ಯರು ಯಶಸ್ವಿಯಾಗಿ ತೆಗೆದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬೆಳಕಿಗೆ ಬಂದಿದೆ. ಮಗುವನ್ನು ಪರೀಕ್ಷೆ ಮಾಡಿದ ಏಮ್ಸ್ ನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ, ಪ್ರೊ. ಸತ್ಯಶ್ರೀ “ಮಗುವಿನ ಎರಡು ಕಾಲುಗಳು ನಾರ್ಮಲ್ ಆಗಿದ್ದು, ಇನ್ನೆರಡು ಕಾಲುಗಳು ಅಸಹಜ ಸ್ಥಿತಿಯಲ್ಲಿವೆ. ಇದಲ್ಲದೆ, ಮಗುವಿನ ಬೆನ್ನಿನ ಮೇಲೆ ದೊಡ್ಡ ಊತ ಮತ್ತು ಒಂದೇ ಒಂದು ಕಿಡ್ನಿ ಕಂಡುಬಂದಿದೆ. ಮಗುವಿಗೆ ಆಪರೇಷನ್ ಮಾಡಿಸಬೇಕು ಎಂದು ಪೋಷಕರಿಗೆ ತಿಳಿಸಿದ್ದಾರೆ.
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close