ನಟ ಮನ್ಸೂರ್ ಅಲಿ ಖಾನ್ ಪುತ್ರ ಅರೆಸ್ಟ್
ನಟ ಮನ್ಸೂರ್ ಅಲಿ ಖಾನ್ ಪುತ್ರ ಅರೆಸ್ಟ್
ಗಾಂಜಾ ಮತ್ತು ಮಾದಕ ದ್ರವ್ಯ ದಂಧೆಕೋರರೊಂದಿಗೆ
ಸಂಪರ್ಕ ಹೊಂದಿರುವ ಆರೋಪದ ಮೇಲೆ ತಮಿಳು ನಟ
ಮನ್ಸೂರ್ ಅಲಿ ಖಾನ್ ಪುತ್ರನನ್ನು ಚೆನ್ನೈ ಪೊಲೀಸರು
ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಗಾಂಜಾ
ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳು ಈ ಹಿಂದಿನಿಂದಲೂ
ಆತನೊಂದಿಗೆ ಸಂಪರ್ಕ ಹೊಂದಿರುವುದಾಗಿ ಗುಪ್ತಚರ
ಇಲಾಖೆಯು ಮಾಹಿತಿ ನೀಡಿದೆ. ಕಳೆದ ವರ್ಷವಷ್ಟೇ ಖಳ ನಟ
ಮನ್ಸೂರ್ ಖಾನ್ ನಟಿ ತ್ರಿಷಾ ಕೃಷ್ಣನ್ ಬಗ್ಗೆ ಅವಹೇಳನಕಾರಿ
ಹೇಳಿಕೆ ನೀಡುವ ಮೂಲಕ ಭಾರೀ ಟೀಕೆ ಮತ್ತು ವಿವಾದಕ್ಕೆ
ಗುರಿಯಾಗಿದ್ದರು.
Link Copied

