ತನಗಿಷ್ಟವಿಲ್ಲದ ಹೇರ್ಕಟ್ ಮಾಡಿಸಿದ್ದಕ್ಕೆ ಇರಿದು ಕೊಂದ ಪಾಗಲ್ ಪ್ರೇಮಿ-webnewskannada
ತನಗಿಷ್ಟವಿಲ್ಲದ ಹೇರ್ಕಟ್ ಮಾಡಿಸಿದ್ದಕ್ಕೆ ಇರಿದು ಕೊಂದ ಪಾಗಲ್ ಪ್ರೇಮಿ
ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬ ತನಗೆ ಇಷ್ಟವಿಲ್ಲದ ಹೇರ್ಕಟ್ ಮಾಡಿಕೊಂಡ ನಂತರ ತನ್ನ ಗೆಳತಿಯನ್ನು ಇರಿದು ಕೊಂದಿದ್ದಾನೆ. ರಕ್ತಸಿಕ್ತ ಚಾಕುವಿನ ಜೊತೆಗಿದ್ದ ಆತನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಯಿತು. ಹಿಂಸಾತ್ಮಕ ದಾಳಿಯಲ್ಲಿ ತನ್ನ ಗೆಳತಿಯನ್ನು ಮಾರಣಾಂತಿಕವಾಗಿ ಇರಿದ ನಂತರ ಪೆನ್ಸಿಲ್ವೇನಿಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ ಬೆಂಜಮಿನ್ ಗುಯಲ್ ಎಂಬ 49 ವರ್ಷದ ವ್ಯಕ್ತಿ ತನ್ನ 50 ವರ್ಷದ ಗೆಳತಿ ತನಗಿಷ್ಟವಿಲ್ಲದ ಹೇರ್ಕಟ್ ಮಾಡಿಸಿಕೊಂಡು ಬಂದಿದ್ದಕ್ಕೆ ಅಸಮಾಧಾನಗೊಂಡು ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತನ್ನ ತಾಯಿಯ ಹೊಸ ಹೇರ್ಕಟ್ ಕಾರಣಕ್ಕೆ ಈ ಕೊಲೆಯಾಗಿದೆ ಎಂದು ಮೃತ ಮಹಿಳೆಯ ಮಗಳು ಪೊಲೀಸರಿಗೆ ತಿಳಿಸಿದ್ದಾರೆ. :

