ಕೋವಿ ಹಿಡಿದು ಕುದುರೆಮುಖ ಅರಣ್ಯ ಅಕ್ರಮ ಪ್ರವೇಶ ಮೂವರ ಬಂಧನ
ಕೋವಿ ಹಿಡಿದು ಕುದುರೆಮುಖ ಅರಣ್ಯ ಅಕ್ರಮ ಪ್ರವೇಶ ಮೂವರ ಬಂಧನ
![]() |
| ಸಾಂದರ್ಭಿಕ ಚಿತ್ರ |
ಅಜೆಕಾರು: ಬೇಟೆಯಾಡುವ ಉದ್ದೇಶದಿಂದ ಕೋವಿ ಹಿಡಿದು ಕುದುರೆಮುಖ ಮೀಸಲು ಅರಣ್ಯ ಅಕ್ರಮ ಪ್ರವೇಶ ಮಾಡಿದ ಆರೋಪದಡಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ದಿನಾಂಕ 30/10/2024 ರಂದು ಅಭಿಲಾಷ್ ಎಸ್.ಬಿ, ಉಪ ವಲಯ ಅರಣ್ಯ ಅಧಿಕಾರಿ, ಅಂಡಾರು ವನ್ಯಜೀವಿ ಘಟಕ (ಹೆ.ಪ್ರ.), ಕಾರ್ಕಳ ವನ್ಯಜೀವಿ ವಲಯ, ಕಾರ್ಕಳ ಇವರು ಇಲಾಖಾ ಮೇಲಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯವರೊಂದಿಗೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ದಿನಾಂಕ 31/10/2024ರ ಮುಂಜಾನೆ ವೇಳೆಗೆ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಆರೋಪಿಗಳು ಅಕ್ರಮವಾಗಿ ಬೇಟೆಯಾಡುವ ಉದ್ದೇಶದಿಂದ ನಾಡಕೋವಿಯನ್ನು ಇಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯದ ಒಳಗಡೆ ಪ್ರವೇಶಿಸಿದ್ದು, ಆರೋಪಿಗಳ ಪೈಕಿ 1] ವಸಂತ, 2] ಜಯ, 3] ರಾಕೇಶ್ ಇವರನ್ನು ದಸ್ತಗಿರಿ ಮಾಡಿದ್ದಾರೆ. ಸಂತೋಷ್ ಓಡಿ ಹೊಗಿದ್ದು ತಲೆ ಮರೆಸಿಕೊಂಡಿರುತ್ತಾನೆ.ಬಂಧಿತ ಆಪಾದಿತರನ್ನು ಮಾನ್ಯ ನ್ಯಾಯಾಧೀಶರ ಆದೇಶದನ್ವಯ ದಿನಾಂಕ 31/10/2024 ರಂದು ಜಿಲ್ಲಾ ಕಾರಾಗೃಹ, ಹಿರಿಯಡ್ಕ, ಉಡುಪಿ ಜಿಲ್ಲೆ. ಇವರ ಅಧೀನಕ್ಕೆ ನೀಡಲಾಗಿರುತ್ತದೆ. ಈ ಬಗ್ಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗಿರುವುದರಿಂದ ಅರಣ್ಯ ಇಲಾಖೆಯಲ್ಲಿ ಸಮರ್ಥ ಅಧಿಕಾರ ಹೊಂದದೇ ಇರುವ ಕಾರಣ ಮಾನ್ಯ ಹೆಚ್ಚುವರಿ ಸಿವಿಲ್ ಜಡ್ಜ್ & ಜೆ.ಎಮ್.ಎಫ್.ಸಿ ಕಾರ್ಕಳ ರವರ ಅನುಮತಿ ಪಡೆದು ಮಾನ್ಯ ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡ ಸೊತ್ತುಗಳೊಂದಿಗೆ ಠಾಣೆಗೆ ಹಾಜರಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2024ಕಲಂ ಕಲಂ: 3, 25 Indian Arms Act 1959 & Sec 4 Explosive Substances Act 1908 ರಂತೆ ಪ್ರಕರಣ ದಾಖಲಾಗಿರುತ್ತದೆ:

