ಯುವಕನ ಶವ ಪತ್ತೆ ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್?
ಯುವಕನ ಶವ ಪತ್ತೆ ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್?
ವಿಜಯಪುರ, ನವೆಂಬರ್ 11: ನಿನ್ನೆ ಬಸವನಬಾಗೇವಾಡಿ ಪಟ್ಟಣದ ಹೊರ ಭಾಗದಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು ಶವದ ಮೇಲೆ ಯಾವುದೇ ಗಾಯದ ಗುರುತೂ ಸಹ ಆಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಬಸವನಬಾಗೇವಾಡಿ ಪೊಲೀಸರು ಪರಿಶೀಲನೆ ನಡೆಸಿ ಸುನೀಲ್ ಭಜಂತ್ರಿ ಎಂದು ಮೃತ ಯುವಕನ ಗುರುತು ಪತ್ತೆ ಹಚ್ಚಿದ್ದರು. ಸದ್ಯ ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿರೋವಾಗಲೇ ಆಘಾತಕಾರಿ ವಿಡಿಯೋಗಳು ಪತ್ತೆಯಾಗಿದ್ದು, ಬಿಗ್ ಟ್ವಿಸ್ಟ್ ಸಿಕ್ಕಿದೆ.
ನನ್ನ ಮಗನ ಕೊಲೆಗೆ ಸಂತೋಷ ಉಕ್ಕಲಿ, ಓಗಪ್ಪ ಉರ್ಪ್ ಮುದಕಪ್ಪಾ ಒಡೆಯರ್, ಬಸವರಾಜ ಉಕ್ಕಲಿ ಹಾಗೂ ಓರ್ವ ಮಹಿಳೆ ಕಾರಣ. ಓರ್ವ ಮಹಿಳೆಯೊಂದಿಗೆ ನನ್ನ ಮಗ ಪ್ರೀತಿ-ಪ್ರೇಮ ಎಂದು ಓಡಾಡಿಕೊಂಡಿದ್ದ. ಈ ವಿಚಾರವಾಗಿ ನಾವು ಆತನಿಗೆ ಬುದ್ದಿ ಮಾತು ಹೇಳಿದ್ದೇವು. ಇದೇ ಮಹಿಳೆ ಜೊತೆಗೆ ಸಂತೋಷ ಉಕ್ಕಲಿಯ ಸಂಬಂಧವೂ ಇತ್ತು. ನನ್ನ ಮಗನ ಸಾವಿನ ಹಿಂದೆ ಇದೇ ಕಾರಣವಿದೆ ಎಂದು ದೂರು ನೀಡಿದ್ದರು.
ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹೊರ ಭಾಗದ ಜಮೀನನಲ್ಲಿ ನಿನ್ನೆ ಯುವಕನ ಶವ ಪತ್ತೆಯಾಗಿತ್ತು. ಬಸವನಬಾಗೇವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದರು. ಶವವಾಗಿ ಪತ್ತೆಯಾದವವನ್ನು ಪಟ್ಟಣದ ವಾಸಿ ಸುನೀಲ್ ಭಜಂತ್ರಿ (21) ಎಂದು ತಿಳಿದುಬಂದಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಸುನೀಲ್ ಪೋಷಕರು ಕಣ್ಣೀರು ಹರಿಸಿದ್ದರು. ನನ್ನ ಮಗನನ್ನು ಕೊಲೆ ಮಾಡಿದ್ಧಾರೆಂದು ಆರೋಪ ಮಾಡಿದ್ದರು.
ಇದರ ಮಧ್ಯೆ ಸುನೀಲ್ ಭಜಂತ್ರಿ ಕತ್ತಿಗೆ ಹಗ್ಗ ಹಾಕಿರುವ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರೀಕ್ಷೆ ನಡೆಸಿ ತನಿಖೆ ಮಾಡಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಶಂಕರ ಮಾರೀಹಾಳ ಹಾಗೂ ಇತರೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು. ಈ ಕುರಿತು ತನಿಖೆ ನಡೆಸಿದ್ದರು.

