Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಶಕ್ತಿಮಾನ್ ದಾರಾವಾಹಿ ಯಾರೆಲ್ಲ ನೋಡಿದ್ದೀರಿ? ಹಾಗಾದರೆ ಈ ಸುದ್ದಿ ಓದಿ

ಶಕ್ತಿಮಾನ್ ದಾರಾವಾಹಿ ಯಾರೆಲ್ಲ ನೋಡಿದ್ದೀರಿ? ಹಾಗಾದರೆ ಈ ಸುದ್ದಿ ಓದಿ



ಮುಕೇಶ್ ಖನ್ನಾ ಅವರು ಶಕ್ತಿಮಾನ್ ಮೂಲಕ ಫೇಮಸ್

 ಆಗಿದ್ದರು. 90ರ ದಶಕದಲ್ಲಿ ಈ ಶೋ ಸಾಕಷ್ಟು ಮನ್ನಣೆ

 ಪಡೆದಿತ್ತು. ಈ ಧಾರಾವಾಹಿಯನ್ನು ನಾವೆಲ್ಲರೂ ಆ

 ಸಮಯದಲ್ಲೇ ಮುಗಿಬಿದ್ದು ನೋಡುತ್ತಿದ್ದೆವು ಈಗ ಮುಕೇಶ್

 ಅವರಿಗೆ 66 ವರ್ಷ. ಅವರು ಈಗ ಮತ್ತೆ ಶಕ್ತಿಮಾನ್ ಬಟ್ಟೆ

 ತೊಟ್ಟಿದ್ದಾರೆ. ಈ ಶೋನ ಮತ್ತೆ ತರೋದಾಗಿ ಮುಕೇಶ್

 ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ

 ವ್ಯಕ್ತವಾಗಿದೆ. ‘ಆ ಶೋಗೆ ಇರುವ ಮರ್ಯಾದೆಯನ್ನು

 ಹಾಳು ಮಾಡಬೇಡಿ’ ಎಂದು ಅನೇಕರು ಕೋರಿದ್ದಾರೆ.

 90ರ ದಶಕದಲ್ಲಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದ ಈ
 ಧಾರಾವಾಹಿಗೆ ಟೀಕೆಗಳು ಯಾಕೆ ಎಂದು ತಿಳಿದಿಲ್ಲ ಎಎನ್​

ಐ ಜೊತೆ ಮಾತನಾಡಿರುವ ಮುಕೇಶ್ ಖನ್ನಾ, ‘ಈ ಬಟ್ಟೆ

 ನನ್ನಲ್ಲೇ ಇದೆ. ನನ್ನಲ್ಲೇ ಬೆರೆತು ಹೋಗಿದೆ. ಶಕ್ತಿಮಾನ್​ನಲ್ಲಿ

 ನಾನು ಉತ್ತಮವಾಗಿ ನಟಿಸಿದ್ದೆ. ಶೂಟಿಂಗ್ ಮಾಡುವಾಗ

 ಕ್ಯಾಮೆರಾ ಇದೆ ಎಂಬುದನ್ನೇ ಮರೆತಿದ್ದೆ. 1997ರಿಂದ

 20005ರವರೆಗೆ ಶೋ ನಡೆದಿತ್ತು. ಈ ಪಾತ್ರ ಈಗಿನ

 ಜನರೇಷನ್ ತಲುಪಬೇಕು’ ಎಂದಿದ್ದಾರೆ. 2027ರ ವೇಳೆಗೆ

 ಈ ಶೋ ಪ್ರಸಾರ ಕಾಣುವ ಭರವಸೆಯನ್ನು ಅವರು

 ಹೊರಹಾಕಿದ್ದಾರೆ. ಶಕ್ತಿಮಾನ್ ಪಾತ್ರ ಮಾಡಬೇಕು

 ಎಂದರೆ ಸಾಕಷ್ಟು ಎನರ್ಜಿ ಬೇಕು. ಆದರೆ, ಮುಕೇಶ್

 ಅವರಿಗೆ ಈಗ ವಯಸ್ಸಾಗಿದೆ. ಅವರಲ್ಲಿ ಮೊದಲಿನ

 ಎನರ್ಜಿ ಇಲ್ಲ. ಹೀಗಾಗಿ, ಅವರು ಶಕ್ತಿಮಾನ್ ಪಾತ್ರ

 ಮಾಡಿದರೆ ಮೊದಲಿನಷ್ಟು ಶೋ ಉತ್ತಮವಾಗಿ ಮೂಡಿ

 ಬರುವುದಿಲ್ಲ ಎಂಬುದು ಅನೇಕರ ನಂಬಿಕೆ. ‘ಶಕ್ತಿಮಾನ್

 ಈಗ ಫೈಟ್ ಮಾಡಿದರೆ ಆಸ್ಪತ್ರೆ ಸೇರಬೇಕು’ ಎಂದು

 ಕೆಲವರು ಹೇಳಿದ್ದಾರೆ. ‘ಮುಕೇಶ್ ಅವರು ಭೂತಕಾಲದಲ್ಲೇ

 ಸ್ಟಕ್ ಆಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಶಕ್ತಿಮಾನ್’

 ಹೆಸರಲ್ಲಿ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿ ಇದೆ. ಇದನ್ನು

 ರಣವೀರ್ ಸಿಂಗ್ ಮಾಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ

 ಮುಕೇಶ್​ಗೆ ಅಸಮಾಧಾನ ಇದೆ. ‘ಬೆತ್ತಲೆ ಆಗಿ

 ಕಾಣಿಸಿಕೊಂಡವರಿಗೆ ಶಕ್ತಿಮಾನ್ ಪಾತ್ರ ಮಾಡುವ

 ಅಧಿಕಾರ ಇಲ್ಲ’ ಎಂದು ಮುಕೇಶ್ ಹೇಳಿದ್ದರು.:

  Subscribe
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close