ಚಿಕ್ಕಮಗಳೂರು ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ
WEBNEWS KANNADA
ಚಿಕ್ಕಮಗಳೂರು ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ
![]() |
| ಸಾಂದರ್ಭಿಕ ಚಿತ್ರ |
ಚಿಕ್ಕಮಗಳೂರು, ನವೆಂಬರ್ 21: ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ (Dattapeeta) ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ, ಪೂಜೆ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆರೋಪ ಮಾಡಿದ್ದಾರೆ. ಘಟನೆ ಖಂಡಿಸಿ ಶಾಖಾದ್ರಿ ಕುಟುಂಬಸ್ಥರು ದರ್ಗಾದ ಎದರು ಪ್ರತಿಭಟನೆ ಮಾಡಿದರು.ಈ ಸಂಬಂಧ ಶಾಖಾದ್ರಿ ಕುಟುಂಬಸ್ಥರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇನ್ನು, ಈ ಹಿಂದೆ ಸೆಪ್ಟೆಂಬರ್ನಲ್ಲೂ ಇದೇ ರೀತಿಯಾದ ಘಟನೆ ನಡೆದಿದ್ದು, ಮುಸ್ಲಿಂ ಮುಖಂಡರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ದಾಖಲೆಯ ಪ್ರಕಾರ ಅದು ದತ್ತಾತ್ರೇಯ ಸ್ವಾಮಿಗಳಿರುವ ಜಾಗವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಗೋರಿ ಕಟ್ಟಿರುವುದು ಅಪರಾಧ. ಮೊದಲು ಗೋರಿಗಳನ್ನು ಎತ್ತಿಕೊಂಡು ಹೋಗಬೇಕು. ಹಿಂದೂಗಳ ಎಂಡೋಮೆಂಟ್ನಲ್ಲಿ ,ದತ್ತಾತ್ರೇಯ ದೇವರ ಹೆಸರಿನ ಜಾಗದಲ್ಲಿ ಗೋರಿ ಕಟ್ಟಿ ಅಪರಾಧ ಮಾಡಲಾಗಿದೆ ಎಂದು ಹೇಳಿದರು.ಗೋರಿ ಅಂತ ಜಗಳಕ್ಕೆ ಬರುವವರು, ಗೋರಿಗಳನ್ನು ತೆಗೆದುಕೊಂಡು ನಾಗೇನಹಳ್ಳಿಗೆ ಹೋಗಲಿ. ತೆಗೆದುಕೊಂಡು ಹೋಗ ಬೇಕಿರುವುದು ಕುಂಕುಮ ಅಲ್ಲ, ಗೋರಿಗಳನ್ನು. ಬಾಬಾ ಬುಡನ್ ದರ್ಗಾ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿದೆ. ದತ್ತಾತ್ರೇಯ ಪೀಠ ಸರ್ವೆ ನಂಬರ್ 198 ರಲ್ಲಿದೆ. ಅವರು ಗೋರಿಗಳನ್ನ ಸರ್ವೇ ನಂಬರ್ 57ರ ಬಾಬಾ ಬುಡನ್ ದರ್ಗಾಕ್ಕೆ ತೆಗೆದುಕೊಂಡು ಹೋಗಲಿ. ಬಾಬಾ ಬುಡನ್ ದರ್ಗಾ ಇರುವ ಜಾಗದಲ್ಲಿ ದತ್ತ ಪಾದುಕೆ ಇದ್ದರೆ ನಾವು ತೆಗೆದುಕೊಂಡು ಹೋಗುತ್ತೇವೆ ಎಂದರು
.jpeg)
