ಸಾವಿನಲ್ಲೂ 16 ವರ್ಷದ ಬಾಲಕನ ಸಾರ್ಥಕತೆ-webnewskannada
WEBNEWS KANNADA
ಸಾವಿನಲ್ಲೂ 16 ವರ್ಷದ ಬಾಲಕನ ಸಾರ್ಥಕತೆ-webnewskannada
ಬೆಳಗಾವಿ ಮೂಲದ 16 ವರ್ಷದ ಬಾಲಕ ಸಾವಿನಲ್ಲೂ
ಸಾರ್ಥಕತೆ ಮೆರೆದಿದ್ದಾನೆ. 63 ವರ್ಷದ ರೋಗಿಯೊಬ್ಬರಿಗೆ
ಯಕೃತ್ ಕಸಿ ಮಾಡಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ
ಸಮೂಹ ಜೀವದಾನ ನೀಡಿದೆ. ಕೇವಲ 3 ಗಂಟೆಯೊಳಗೆ
ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್'ನ್ನು ಕಸಿ
ಮಾಡುವಲ್ಲಿ ಸ್ಪರ್ಶ್ ಯಶಸ್ವಿಯಾಗಿದೆ. 'ತಮ್ಮ ಮರುಜೀವ,
ಮರುಜೀವನದ ನಿರೀಕ್ಷೆಯಲ್ಲಿರುವ ರೋಗಿಗಳಿಗೆ
ಆಶಾಕಿರಣವಾಗಿರುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ'
ಎಂದು ಸ್ಪರ್ಶ್ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್
ಪಾಟೀಲ್ ಹೇಳಿದ್ದಾರೆ.

