ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ವಿಜಯದಶಮಿ ಪರ್ಯಂತ
ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ವಿಜಯದಶಮಿ ಪರ್ಯಂತ
ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು* *ಇದೇ ಬರುವ ದಿನಾಂಕ 03-10-2024 ನೇ ಗುರುವಾರ ದಿಂದ ಮೊದಲ್ಗೊಂಡು ದಿನಾಂಕ 13-10-2024 ನೇ ಆದಿತ್ಯವಾರ ವಿಜಯದಶಮಿ ಪರ್ಯಂತ ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ವೇದಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಇವರ ಪೌರೋಹಿತ್ಯ ದಲ್ಲಿ ಶರನ್ನವರಾತ್ರಿ ಮಹೋತ್ಸವ ವು ದಿನಂಪ್ರತಿ ಚಂಡಿಕಾ ಯಾಗ ಹಾಗೂ ದುರ್ಗಾ ನಮಸ್ಕಾರ ಪೂಜೆಯೊಂದಿಗೆ ನಡೆಯಲಿರುವುದು
ವಿ. ಸೂ : ನವರಾತ್ರಿಯ ಸಮಯದಲ್ಲಿ ಸೇವೆ ಮಾಡಲಿಚ್ಚಿಸುವವರು ತಮ್ಮ ಸೇವೆ ಮತ್ತು ಸೇವಾ ದಿನಾಂಕವನ್ನು ಕಚೇರಿಯಲ್ಲಿ ತಿಳಿಸಬೇಕಾಗಿ ವಿನಂತಿ ಭಕ್ತಾದಿಗಳು ಪರಿವಾರ ಇಷ್ಟ ಮಿತ್ರರೊಡಗೂಡಿ ಶ್ರೀದೇವಿ ಸನ್ನಿಧಿಗೆ ಆಗಮಿಸಿ ಉತ್ಸವಾದಿ ಧಾರ್ಮಿಕ ಕಾರ್ಯಕ್ರಮ ಕ್ರಮಗಳಲ್ಲಿ ಭಾಗವಹಿಸಿ ಶ್ರೀ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀದೇವಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ* *ಅಧ್ಯಕ್ಷರು ಹಾಗೂ ವಿಶ್ವಸ್ಥರು ಶ್ರೀ ಏಕನಾಥೇಶ್ವರಿ ಟ್ರಸ್ಟ್ (ರಿ)ಬಾರಕೂರು ಸಲಹಾ ಸಮಿತಿ, ವ್ಯವಸ್ಥಾಪನ ಸಮಿತಿ,ಮಹಿಳಾ ಘಟಕ, ಪ್ರಧಾನ ಅರ್ಚಕರು ಅರ್ಚಕ ವೃಂದ ಸಿಬ್ಬಂದಿ ವರ್ಗ ಹಾಗೂ ದೇವಾಡಿಗ ಸಮಾಜದ ಸರ್ವ ಸಂಘ ಸಂಸ್ಥೆಗಳು

