Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರದಲ್ಲಿ ಇಂದು ರಕ್ಷಾ ಬಂಧನ ಕಾರ್ಯಕ್ರಮ

ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರದಲ್ಲಿ ಇಂದು ರಕ್ಷಾ ಬಂಧನ ಕಾರ್ಯಕ್ರಮ

webNews

ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರದಲ್ಲಿ ಇಂದು ರಕ್ಷಾ ಬಂಧನ ಕಾರ್ಯಕ್ರಮ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಮಾಡಲಾಯಿತು. ವೇದಮೂರ್ತಿ ಪ್ರಭಾಕರ ಬಾಯರಿ ಯವರು ರಕ್ಷಾಬಂಧನದ ಸಂದೇಶವನ್ನು ನೀಡಿದರು. ಹಿರಿಯರಾದ ಸುಧಾಕರ್ ರಾವ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ನೀಡಿದರು.

ವೇದಿಕೆಯಲ್ಲಿ ಬಾರಕೂರಿನ ಉದ್ಯಮಿಗಳಾದ ರಾಘವೇಂದ್ರ ಪೂಜಾರಿ ಬಟ್ಟೆ ವಿನಾಯಕ ಎಲೆಕ್ಟ್ರಾನಿಕ್ಸ್, ವಿನಯ್ ಕುಮಾರ್ ಸಭ್ಯ ಮೊಬೈಲ್ಸ್, ಕುಶಲ್ ಪೂಜಾರಿ ನಮನ ಟ್ರಾನ್ಸ್ಪೋರ್ಟ್, ಗೌರವಾಧ್ಯಕ್ಷರಾದ ಯಶೋದಾ ಸುವರ್ಣ, ಮಾಜಿ ಅಧ್ಯಕ್ಷರಾದ ಜಾನವಿ ಪೂಜಾರಿ ಹಾಗೂ ಪೋಷಕ ಪ್ರತಿನಿಧಿ ಸ್ಮಿತಾ ಕೆ ಶಾಸ್ತ್ರಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಿಶುಮಂದಿರದ ಅಧ್ಯಕ್ಷರಾದ ಕೃಷ್ಣ ಜೀ ಪೂಜಾರಿಯವರು ವಹಿಸಿದ್ದರು.

ಅತಿಥಿ ಗಣ್ಯರು ಹಾಗೂ ಪುಟಾಣಿಗಳು, ಹಾಗೂ ಮಾತೆಯರು ರಕ್ಷಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನದ ಆಚರಣೆಯನ್ನು ಮಾಡಲಾಯಿತು. ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಯನ್ನು ಆಚರಿಸಲಾಯಿತು. ಶಿಶುಮಂದಿರದ ಹಿರಿಯ ಹಿಂದಿನ ಸಹಾಯಕಿಯಾದ ರತ್ನಾವತಿ ಯವರನ್ನು ಸನ್ಮಾನಿಸಲಾಯಿತು. ಶಿಶುಮಂದಿರದ ಕಾರ್ಯದರ್ಶಿಯವರಾದ ಮಂಜುನಾಥ್ ಪೂಜಾರಿ ಅವರು ಧನ್ಯ ವಾದವನ್ನು ಸಮರ್ಪಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಶುಮಂದಿರದ ಉಪಾಧ್ಯಕ್ಷರಾದ ಪೂರ್ಣಿಮಾ ಎಸ್ ಅವರು ನೆರವೇರಿಸಿದರು.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close