Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ನಿಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗೂ ಬ್ಲೂ ಟಿಕ್‌ ಬೇಕ


ನಿಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗೂ ಬ್ಲೂ ಟಿಕ್‌ ಬೇಕಾ

webNews

ಪ್ರತಿಷ್ಠಿತ ಸೋಷಿಯಲ್‌ ಮೀಡಿಯಾದ ಫ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ ಒಂದಲ್ಲ ಒಂದು ಹೊಸ ಹಾಗೆಯೇ ವಿಭಿನ್ನ ಫೀಚರ್‌ಗಳನ್ನು ತನ್ನ ಬಳಕೆದಾರರ ಸಲುವಾಗಿ ಪರಿಚಯಿಸುತ್ತಲೇ ಇರುತ್ತವೆ. ಈ ಹಿಂದೆ ಸೆಲೆಬ್ರಿಟಿ ಮತ್ತು ಪ್ರತಿಷ್ಠಿತ ಬ್ರಾಂಡ್‌ಗಳ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಿಗೆ ಮಾತ್ರ ಬ್ಲೂ ಟಿಕ್‌ ನೀಡಲಾಗುತ್ತಿತ್ತು. ಆದರೆ ಕೆಲ ಸಮಯಗಳ ಹಿಂದೆ ಸಾಮಾನ್ಯರು ಕೂಡಾ ತನ್ನ ಅಕೌಂಟ್‌ನಲ್ಲಿ ಬ್ಲೂ ಟಿಕ್‌ ಪಡೆಯುವ ಫೀಚರ್‌ ಅನ್ನು ಇನ್‌ಸ್ಟಾಗ್ರಾಮ್‌ ಪರಿಚಯಿಸಿತ್ತು. ಆದರೆ ಹೆಚ್ಚಿನವರಿಗೆ ಬ್ಲೂ ಟಿಕ್‌ ಪಡೆಯುವುದು ಹೇಗೆ ಎಂಬುವುದು ತಿಳಿದಿರುವುದಿಲ್ಲ. ಈ ಕೆಲವು ಸಿಂಪಲ್‌ ಸ್ಟೆಪ್ಸ್‌ಗಳನ್ನು ಅನುಸರಿಸುವ ಮೂಲಕ ನಿಮ್ಮ ಖಾತೆಯಲ್ಲೂ ಬ್ಲೂ ಟಿಕ್‌ ಪಡೆಯಬಹುದಾಗಿದೆ.ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲೂ ಟಿಕ್‌ ಪಡೆಯುವುದು ಹೇಗೆ: ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್‌ ತೆರೆದು, ನಿಮ್ಮ ಪ್ರೊಫೈಲ್‌ ಮೇಲೆ ಕ್ಲಿಕ್‌ ಮಾಡಿ. ನಂತರ ಅಲ್ಲಿ ಬಲ ಮೇಲ್ಭಾಗದಲ್ಲಿರುವ ಸೆಟ್ಟಿಂಗ್‌ ಬಟನ್‌ (ಹ್ಯಾಂಬರ್ಗರ್‌ ಐಕಾನ್‌) ಕ್ಲಿಕ್‌ ಮಾಡಿಹೀಗೆ ವೇರಿಫಿಕೇಶನ್‌ ಆಪ್ಷನ್‌ ಕ್ಲಿಕ್‌ ಮಾಡಿದಾಗ ಅಪ್ಲೈ ಫಾರ್‌ ಇನ್‌ಸ್ಟಾಗ್ರಾಮ್‌ ವೇರಿಫಿಕೇಷನ್‌ ಎಂದು ಬರುತ್ತೆ. ಅಲ್ಲಿ ನೀವು ನಿಮ್ಮ ಧೃಡೀಕರಣವನ್ನು ಧೃಢೀಕರಿಸಬೇಕಾಗುತ್ತದೆ. ಇಲ್ಲಿ ಮೊದಲ ಹಂತದಲ್ಲಿ ನಿಮ್ಮ ಇನ್‌ಸ್ಟಾಗ್ರಾಮ್‌ ಯೂಸರ್‌ ನೇಮ್‌, ಬಳಿಕ ನಿಮ್ಮ ಅಧೀಕೃತ ಹೆಸರನ್ನು ಬರೆದು ಡ್ರೈವಿಂಗ್‌ ಲೈಸನ್ಸ್‌ ಅಥವಾ ಪಾಸ್‌ಪೋರ್ಟ್‌ ಅಥವಾ ಯುಟಿಲಿಟಿ ಬಿಲ್‌ ಹೀಗೆ ಯಾವುದಾದರೂ ಡಾಕ್ಯುಮೆಂಟ್‌ ಕಾಪಿಯನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಎರಡನೇ ಹಂತದಲ್ಲಿ ನೀವು ಸ್ಪೋರ್ಟ್ಸ್‌, ಫ್ಯಾಶನ್‌, ಡಿಜಿಟಲ್‌ ಕ್ರಿಯೇಟರ್‌, ಇನ್ಫುಯೆನ್ಸರ್‌, ಬ್ರಾಂಡ್‌ ಇತ್ಯಾದಿ ಆಯ್ಕೆಯಲ್ಲಿ ಯಾವುದಾದರು ಒಂದು ಕೆಟಗರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ನೀವು ನಿಮ್ಮ ದೇಶ ಅಥವಾ ಸ್ಥಳವನ್ನು ಕೂಡಾ ಆಯ್ಕೆ ಮಾಡಬಹುದು. ಇದು ಐಚ್ಛಿಕವಾಗಿದೆ. ಮೂರನೇ ಹಂತದಲ್ಲಿ ನಿಮ್ಮ ಖಾತೆಯು ಸಾರ್ವಜನಿಕ ಹಿತಾಸಕ್ತಿಯಲ್ಲಿದೆ ಎಂದು ತೋರಿಸುವ 3 ಲಿಂಕ್‌ಗಳನ್ನು ಸೇರಿಬಹುದು. ಕೊನೆಯದಾಗಿ ಕೆಳಭಾಗದಲ್ಲಿರುವ ಸಬ್‌ಮಿಟ್‌ ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ. ಹೀಗೆ ಮಾಡಿದ ಬಳಿಕ ಇನ್‌ಸ್ಟಾಗ್ರಾಮ್‌ ಟೀಮ್‌ ನಿಮ್ಮ ಖಾತೆಯನ್ನು ಪರಿಶೀಲಿಸುತ್ತದೆ ಹಾಗೂ 30 ದಿನ ಅಥವಾ ಕೆಲವು ವಾರದೊಳಗೆ ನಿಮ್ಮ ಖಾತೆಗೆ ಬ್ಲೂ ಟಿಕ್‌ ನೀಡುತ್ತದೆ. ಪರ್ಸನಲ್ ಅಥವಾ ಪ್ರೈವೇಟ್ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಬ್ಲೂ ಟಿಕ್‌ ಪಡೆಯಬಹುದು: ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಕೌಂಟ್‌ ತೆರೆದು, ಹ್ಯಾಂಬರ್ಗರ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಅಲ್ಲಿ ಕೆಳಭಾಗದಲ್ಲಿ Meta Verified ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ. ಬಳಿಕ ಅಲ್ಲಿ ಯುವರ್‌ ಪರ್ಸನಲ್‌ ಪ್ರೊಫೈಲ್‌ ಅಥವಾ ಯುವರ್‌ ಬ್ಯುಸಿನೆಸ್‌ ಪ್ರೊಫೈಲ್‌ ಆಯ್ಕೆ ಮಾಡಿ. ನಂತರ ಕನ್ಫರ್ಮ್‌ ಮತ್ತು ಪೇ ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ ತಿಂಗಳಿಗೆ 639 ರೂ. ಪೇ ಮಾಡಿ ಬ್ಲೂ ಟಿಕ್‌ ಪಡೆಯಬಹುದು.

ನೇರಪ್ರಸಾರಗಾಗಿ ಸಂಪರ್ಕಿಸಿ : 9483578321

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close