ಬ್ರಹ್ಮಾವರ ತಾಲೂಕು ಗ್ರಾಮ ಒನ್ ವತಿಯಿಂದ 78ನೇ ಸ್ವಾತಂತ್ರೋತ್ಸವದ ವಿಭಿನ್ನ ಆಚರಣೆ
webNews
ಬ್ರಹ್ಮಾವರ ತಾಲೂಕು ಗ್ರಾಮ ಒನ್ ವತಿಯಿಂದ 78ನೇ ಸ್ವಾತಂತ್ರೋತ್ಸವ ವನ್ನು ವಿಭಿನ್ನವಾಗಿ ಆಚರಿಸಲಾಯಿತು.
೭೮ನೇ ಸ್ವಾತಂತ್ರೋತ್ಸವದ ಅಂಗವಾಗಿ , ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳು , ಬ್ರಹ್ಮಾವರ ತಾಲೂಕು ಇವರ ವತಿಯಿಂದ, ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿಗಳ ಬಂಗಾರದ ಪದಕದ ಗೌರವಕ್ಕೆ ಭಾಜನರಾದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀ ಮಧು ಬಿ. ವಿ ಇವರನ್ನು ಪೊಲೀಸ್ ಠಾಣೆಯ ಅವರ ಕಚೇರಿಯಲ್ಲಿ ಭೇಟಿ ಮಾಡಿ ಗೌರವಿಸಲಾಯಿತು. ಹಾಗೂ ಸ್ಪಂದನ ದಿವ್ಯಾಂಗರ ತರಬೇತಿ ಮತ್ತು ಸಂರಕ್ಷಣಾ ಸಂಸ್ಥೆ , ನೇಜಾರು, ಸಂತೆಕಟ್ಟೆ , ಉಡುಪಿ ಇಲ್ಲಿಗೆ ಭೇಟಿ ಕೊಟ್ಟು, ಸಂಸ್ಥೆಯ ಮುಖ್ಯಸ್ಥರ ಸೇವೆಗಾಗಿ ಗೌರವ ಸಮರ್ಪಣೆಗಳನ್ನು ನೀಡಿ ಗೌರವಿಸಲಾಯಿತು. ದಿವ್ಯಾಂಗ ವಿಶೇಷ ಚೇತನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಮತ್ತು UDID ಕಾರ್ಡ್ ಮಾಡಿ ಕೊಡುವ ಪಕ್ರಿಯೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜಶೇಖರ್ ಬೈಕಾಡಿ, ಮಮತಾ ರಾಜಶೇಖರ್, ನಂದಿನಿ ಕೊಕ್ಕರ್ಣೆ , ಶಾಂತಿ ಗೋಳಿಯಂಗಡಿ, ಚಂದ್ರ ಯೆಡ್ತಾಡಿ, ಆನಂದ್ ಸೈಬ್ರಕಟ್ಟೆ, ಧನಲಕ್ಷ್ಮಿ ಆನಂದ್, ಅಶ್ವಿನಿ ಕೋಟಾರಿ , ನಂದಕಿಶೋರ್ ವಾರಂಬಳ್ಳಿ, ವಿದ್ಯಾ ನಂದಕಿಶೋರ್ ಮತ್ತಿತರರು ಉಪಸ್ಥಿತರಿದ್ದರು..
ಕರಾವಳಿ,web news kannada