ಸಂತೆಗುಡ್ಡೆ ಬಾರ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
webNews
ಸಂತೆಗುಡ್ಡೆ ಬಾರ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು SDMC ಅಧ್ಯಕ್ಷರಾದ ಶ್ರೀಮತಿ ಸುನಿತಾ ಜಿ ಅವರು ನೆರವೇರಿಸಿದರು,
ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು
ಈ ಸಂದರ್ಭದಲ್ಲಿ
ಮುಖ್ಯ ಅತಿಥಿಗಳಾಗಿ ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ ಶಾಂತರಾಮ ಶೆಟ್ಟಿ, ಪಂಚಾಯತ್ ಸದಸ್ಯರಾದ ಶ್ರೀಮತಿ ಭಾರತಿ ಆರ್.ಕಾಮತ್,
ಕೂಸ ಎಲ್ ಕುಂದರ್, ಹೊಸ್ಕೆರೆ ಬಾರ್ಕೂರು, ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಗಣೇಶ ಶೆಟ್ಟಿ,ರೋ, ರತ್ನಾಕರ್ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿಗಳು S.D.M.C ಸದಸ್ಯರು ಶಾಲಾ ಹಳೆ ವಿದ್ಯಾರ್ಥಿಗಳು ,
ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು
ಶಾಲಾ ಮುಖ್ಯಶಿಕ್ಷಕಿ ಶಾರದ ಕುಮಾರಿಯವರು ಅತಿಥಿಗಳನ್ನು ಸ್ವಾಗತಿಸಿದರು, ಸಹಶಿಕ್ಷಕಿ ಶೋಭಾರವರು ಸಿಹಿ ತಿಂಡಿ ನೀಡಿದವರ ಹೆಸರನ್ನು ವಾಚಿಸಿದರು, ಧನ್ಯವಾದ ಸಮರ್ಪಣೆಯೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ಮುಕ್ತಾಯಗೊಂಡಿತು
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು S.D.M.C ಅಧ್ಯಕ್ಷರಾದ ಶ್ರೀಮತಿ ಸುನಿತಾ ರವರು ವಹಿಸಿದ್ದರು ಹಾಗೂ ಹಳೆ ವಿದ್ಯಾರ್ಥಿ ಶಿವ.ಟಿ ಪೂಜಾರಿ ಬೆಣ್ಣೆಕುದ್ರು, ,
ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಗಣೇಶ ಶೆಟ್ಟಿ, ನಿವೃತ್ತ ಸೈನಿಕರಾದ ಶ್ರೀರಾಮ ಪೂಜಾರಿ, ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ನ C.R.P ಯಾದ ಶ್ರೀಮತಿ ಲಲಿತಾ,ಮುಖ್ಯ ಶಿಕ್ಷಕಿ ಶಾರದ ಕುಮಾರಿ,ಪಂಚಾಯತ್ ಸದಸ್ಯರಾದ ಕೂಸ ಎಲ್ ಕುಂದರ್ ಹೊಸ್ಕೆರೆ
ಉಪಸ್ಥಿತರಿದ್ದರು ಮುಖ್ಯ ಶಿಕ್ಷಕಿವರಾದ ಶಾರದ ಕುಮಾರಿ ಅವರು ಅತಿಥಿ ಗಳಿಗೆ ಪುಷ್ಪ ನೀಡಿ ಸ್ವಾಗತಿಸಿ ಸ್ವಾತಂತ್ರ್ಯೋತ್ಸವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು
ಇದೇ ಸಂದರ್ಭದಲ್ಲಿ ದಾನಿಗಳಾದ ಟಿ ಶಿವ ಪೂಜಾರಿ ಬೆಣ್ಣೆಕುದ್ರು ಅವರನ್ನು ಅಭಿನಂದಿಸಿ ಗೌರವಿಸಲಾಯಿತು ಶಾಲೆಯನ್ನು ಉದ್ದೇಶಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷರಾದ ಬಿ ಗಣೇಶ್ ಶೆಟ್ಟಿ, C.R. ಶ್ರೀಮತಿ ಲಲಿತಾ,ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು, ಸನ್ಮಾನಗೊಂಡ ಶಿವ. ಟಿ ಪೂಜಾರಿ ಬೆಣ್ಣೆಕುದ್ರು ಹಾಗೂ S.D.M.C ಅಧ್ಯಕ್ಷರು ಕೂಡ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು
ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಗುಲಾಬಿ ಅವರು ಧನ್ಯವಾದ ಸಮರ್ಪಿಸಿದರು
ಕರಾವಳಿ,web news kannada