Kambala ಕಂಬಳ'ದ ಹೀರೋ 'ನಾಗು' ಇನ್ನಿಲ್ಲ!
Kambala ಕಂಬಳ'ದ ಹೀರೋ 'ನಾಗು' ಇನ್ನಿಲ್ಲ!
ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಹೆಸರು
ಮಾಡಿದ್ದ 'ನಾಗು' ಎಂಬ ಕೋಣ ಅಸುನೀಗಿದೆ. ಕಳೆದ
ವಾರವಷ್ಟೇ ಕಂಬಳದ ಮತ್ತೊಬ್ಬ ಉದಯೋನ್ಮುಖ
ತಾರೆಯಾಗಿದ್ದ 'ಲಕ್ಕಿ'ಯನ್ನು ಕಳೆದುಕೊಂಡಿದ್ದು, ಇದು
ಮತ್ತೊಂದು ಆಘಾತ ಎನ್ನುತ್ತಾರೆ ಕಂಬಳಾಭಿಮಾನಿಗಳು.
4 ವರ್ಷಗಳಿಂದ ಹಲಗೆ ಸೀನಿಯರ್ ವಿಭಾಗದಲ್ಲಿ ಹಲವು
ಪ್ರಶಸ್ತಿಗಳನ್ನು ತಂದುಕೊಟ್ಟಿದ್ದ ನಾಗು ಹೃದಯಾಘಾತದಿಂದ
ಅಸುನೀಗಿದೆ. ಜಂಪು ಮಂಕುತೋಟ ಅನಿಲ್ ಶೆಟ್ಟಿಯವರ
ಯಜಮಾನಿಕೆಯಲ್ಲಿ ನಾಗು ಬೆಳೆಯುತ್ತಿದ್ದ ಎನ್ನಲಾಗಿದೆ.

