Weight Gain Tips: ಸಪೂರ ಇದ್ದೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
ನೀವು ಕೂಡ ತೂಕ ಕಡಿಮೆ ಇದ್ದರೆ, ದೇಹದ ತೂಕ ಹೆಚ್ಚಿಸಿಕೊಳ್ಳಲು ಈ ಕೆಳಗೆ ನೀಡಲಾದ ಕೆಲವು ಟಿಪ್ಸ್ ಫಾಲೋ ಮಾಡಿ. ಅದನ್ನು ಬಿಟ್ಟು ಟಿವಿ ಪೇಪರ್ ನಲ್ಲಿ ಬರುವ ಜಾಹೀರಾತಿನಲ್ಲಿ ಬರುವ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯಕ್ಕೆ ಅಡ್ಡ ಪರಿಣಾಮವನ್ನು ತಂದುಕೊಳ್ಳಬೇಡಿ
ಈಗಿನ ಕಾಲದಲ್ಲಿ ತೆಳ್ಳಗಿರುವುದು ಸಾಮಾನ್ಯವಾಗಿ ಆರೋಗ್ಯಕರ ಎಂದು ಹೇಳಲಾಗುತ್ತದೆ. ಆದರೆ ನೀವು ಪೌಷ್ಟಿಕಾಂಶದ ಕೊರತೆಯಿಂದಾಗಿ ಅಥವಾ ಗರ್ಭಿಣಿಯಾಗಿರುವಾಗ ತೂಕ ಕಳೆದುಕೊಂಡಿದ್ದರೆ, ನಿಜಕ್ಕೂ ಅದು ಕಳವಳ ಪಡಬೇಕಾದ ವಿಷಯ. ಹಾಗಾಗಿ ನೀವು ಕಡಿಮೆ ತೂಕ ಹೊಂದಿದ್ದರೆ, ಈ ಕುರಿತು ಸರಿಯಾದ ಪರಿಶೀಲನೆಗೆ ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಲೇಬೇಕು. ಒಟ್ಟಾಗಿ ಅವರ ಸಲಹೆಯ ಪ್ರಕಾರ ಮತ್ತು ನಿಮ್ಮ ಪರಿಶ್ರಮದ ಮೂಲಕ, ನಿಮ್ಮ ದೇಹಕ್ಕೆ ಅನುಗುಣವಾದ ಆರೋಗ್ಯಕರ ತೂಕವನ್ನು ಹೊಂದುವ ಗುರಿಯನ್ನು ಸಾಧಿಸಬಹುದು
ನಿಮ್ಮ ತೂಕ ಕಡಿಮೆ ಇದ್ದಾಗ, ಬೇಗ ಹೊಟ್ಟೆ ತುಂಬಿದಂತೆ ಅನಿಸಬಹುದು.
ಎರಡು ಅಥವಾ ಮೂರು ಹೊತ್ತಿಗೆ ಹೊಟ್ಟೆ ತುಂಬಾ ತಿನ್ನುವ ಬದಲು ದಿನದಲ್ಲಿ 5 ರಿಂದ 6 ಬಾರಿ ಸ್ವಲ್ಪ ಸ್ವಲ್ಪ ಪ್ರಮಾಣದ ಆಹಾರವನ್ನು ತಿನ್ನಿ.
ಪೌಷ್ಟಿಕಾಂಶಯುಕ್ತ ಆಹಾರ ಆಯ್ಕೆ ಮಾಡಿಕೊಳ್ಳಿ: ಆರೋಗ್ಯಕರ ಆಹಾರಕ್ರಮದ ಭಾಗವಾಗಿ, ಸಂಪೂರ್ಣ ಧಾನ್ಯದ ಬ್ರೆಡ್, ಪಾಸ್ತಾಗಳು ಮತ್ತು ಧಾನ್ಯಗಳು; ಹಣ್ಣುಗಳು ಮತ್ತು ತರಕಾರಿಗಳು; ಹಾಲಿನ ಉತ್ಪನ್ನಗಳು, ತೆಳು ಪ್ರೋಟೀನ್ ಮೂಲಗಳು ಡ್ರೈ ಫ್ರೂಟ್ಸ್ ಮತ್ತು ಬೀಜಗಳನ್ನು ಆಯ್ಕೆ ಮಾಡಿಕೊಳ್ಳಿ.
ಸ್ಮೂಥಿ ಮತ್ತು ಶೇಕ್ಗಳನ್ನು ಸೇವಿಸಿ: ಡಯೆಟ್ ಸೋಡಾ, ಕಾಫಿ ಮತ್ತು ಕಡಿಮೆ ಕ್ಯಾಲೊರಿಯುಕ್ತ ಪಾನೀಯಗಳನ್ನು ಸೇವಿಸಬೇಡಿ. ಬದಲಿಗೆ, ಹಾಲು ಮತ್ತು ಹಣ್ಣುಗಳಿಂದ ತಯಾರಿಸಿದ ಆರೋಗ್ಯಕರ ಶೇಕ್ಗಳನ್ನು ಕುಡಿಯಿರಿ.ಅದಕ್ಕೊಂದಿಷ್ಟು ಪುಡಿ ಮಾಡಿದ ಅಗಸೆ ಬೀಜವನ್ನು ಸೇರಿಸುವುದನ್ನು ಮರೆಯದಿರಿ
ನೀರು ಸೇವನೆ ಬಗ್ಗೆ ಗಮನ ಇರಲಿ: ಊಟಕ್ಕೆ ಮುಂಚೆ ನೀರನ್ನು ಕುಡಿಯುವುದರಿಂದ ಹಸಿವು ಕುಂದುತ್ತದೆ ಎಂಬುವುದು ಕೆಲವರ ಅನುಭವ. ಅಂತಹ ಸಂದರ್ಭಗಳಲ್ಲಿ ಊಟ ಅಥವಾ ತಿಂಡಿಯ ಜೊತೆಗೆ ಅಧಿಕ ಕ್ಯಾಲೋರಿ ಉಳ್ಳ ಪಾನೀಯಗಳನ್ನು ಸೇವಿಸುವುದು ಉತ್ತಮ.
ಪ್ರತಿಯೊಂದು ಆಹಾರದ ಲೆಕ್ಕವಿರಲಿ: ಡ್ರೈ ಫ್ರೂಟ್ಸ್, ಪೀನಟ್ ಬಟರ್, ಚೀಸ್, ಒಣ ಹಣ್ಣುಗಳು ಮತ್ತು ಅವಕಾಡೋಗಳನ್ನು ತಿನ್ನಿ.
ರಾತ್ರಿ ಮಲಗುವ ವೇಳೆ ಪೀನಟ್ ಬಟರ್, ಜೆಲ್ಲಿ ಸ್ಯಾಂಡ್ವಿಚ್ ಅಥವಾ ಬೆಣ್ಣೆ ಹಣ್ಣು, ತರಕಾರಿ ತುಂಡುಗಳು ಮತ್ತು ತೆಳು ಮಾಂಸ ಅಥವಾ ಚೀಸ್ ತಿನ್ನಿ.
ನಿಮ್ಮ ಊಟದಲ್ಲಿ ಕ್ಯಾಲೋರಿಯನ್ನು ಹೆಚ್ಚಿಸಬೇಕು ಎಂದಾದಲ್ಲಿ, ಇನ್ನಷ್ಟು ತಿನಿಸುಗಳನ್ನು ಸೇರಿಸಿ- ಕ್ಯಾಸರೋಲ್ಗಳಲ್ಲಿ ಚೀಸ್ ಮತ್ತು ಬೇಯಿಸಿದ ಮೊಟ್ಟೆಗಳು ಹಾಗೂ ಸೂಪ್ ಮತ್ತು ಸ್ಟ್ಯೂಗಳಲ್ಲಿ ಕೊಬ್ಬು ರಹಿತ ಹಾಲು.ನೀವು ಕಡಿಮೆ ತೂಕ ಹೊಂದಿದ್ದರೂ ಕೂಡ, ಸಕ್ಕರೆ ಮತ್ತು ಕೊಬ್ಬು ಸೇವನೆಯ ಕುರಿತು ಎಚ್ಚರದಿಂದ ಇರುವುದನ್ನು ಮರೆಯದಿರಿ. ಅಪರೂಪಕ್ಕೆ ಐಸ್ಕ್ರೀಂ ಜೊತೆ ಒಂದು ತುಂಡು ಪೈ ಸೇವಿಸಿದರೆ ಪರವಾಗಿಲ್ಲ.. ಬ್ರಾನ್ ಮಫ್ಫಿನ್ಗಳು, ಮೊಸರು ಮತ್ತು ಗ್ರನೋಲಾ ಬಾರ್ಗಳು ಈ ನಿಟ್ಟಿನಲ್ಲಿ ಒಳ್ಳೆಯ ಆಯ್ಕೆ.
ವ್ಯಾಯಾಮ: ವ್ಯಾಯಾಮ, ಅದರಲ್ಲೂ ಮುಖ್ಯವಾಗಿ ಶಕ್ತಿ ತರಬೇತಿ, ನಿಮ್ಮ ಸ್ನಾಯುಗಳನ್ನು ರೂಪಿಸುವ ಮೂಲಕ ತೂಕವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ವ್ಯಾಯಾಮದಿಂದ ನಿಮ್ಮ ಹಸಿವು ಕೂಡ ಹೆಚ್ಚಬಹುದು

