ಮೃತ ಪ್ರೇಮಿಗಳಿಗೆ ಪ್ರೇತ ಮದುವೆ ಮಾಡಿಸಿದ ಕುಟುಂಬಸ್ಥರು webnews kannada
ಮೃತ ಪ್ರೇಮಿಗಳಿಗೆ ಪ್ರೇತ ಮದುವೆ ಮಾಡಿಸಿದ ಕುಟುಂಬಸ್ಥರು
Symbolising union in afterlife
ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಸತ್ತವರಿಗೆ ಪ್ರೇತ ವಿವಾಹವೆಂದು ಮದುವೆ ಮಾಡಿಸುವ ಸಂಪ್ರದಾಯವಿದೆ ಎಂದು ತಿಳಿದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ದೇಶಗಳಲ್ಲಿ ಕುಟುಂಬ ಸದಸ್ಯರು ಸತ್ತವರಿಗೂ ಮದುವೆ ಮಾಡಿಸಿದ್ದಾರೆ. ನಿಜ ನೀವು ಇದನ್ನು ನಂಬಲೇಬೇಕು ಇತ್ತೀಚೆಗೆ ಅಪಘಾತವೊಂದು ನಡೆದಿದ್ದು, ಏಕಕಾಲಕ್ಕೆ ಯುವಕ-ಯುವತಿ ಜೋಡಿ ಸಾವನ್ನಪ್ಪಿದ್ದರು. ಇದೀಗ ಆ ಪ್ರೇಮಿಗಳ ಜೋಡಿಗೆ ಎರಡೂ ಕುಟುಂಬದವರು ಸೇರಿ ಸಂಪ್ರದಾಯದ ಪ್ರಕಾರವೇ ವಿವಾಹ ಮಾಡಿಸಿ, ಸಂತೃಪ್ತಿ-ಸಮಾಧಾನ ಹೊಂದಿದ್ದಾರೆ. ಈ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಯಾಂಗ್ ಜಿಂಗ್ಶನ್ (31) ಮತ್ತು ಲಿ ಶುಯಿಂಗ್ (32) ಎಂಬ ಯುವ ಜೋಡಿ ಮಲೇಷ್ಯಾದಲ್ಲಿ ಮಾರಣಾಂತಿಕ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪೆರಾಕ್‌ನ ವಾಯವ್ಯ ಪ್ರದೇಶದಲ್ಲಿ ಕಳೆದ ತಿಂಗಳು ಮೇ 24 ರಂದು ಈ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಯುವ ಜೋಡಿ ಪ್ರೇಮಿಗಳಾಗಿದ್ದರು. ಶೀಘ್ರದಲ್ಲೇ ಮದುವೆಯಾಗುವ ಆಲೋಚನೆಯನ್ನೂ ಹೊಂದಿದ್ದರು ಎಂದು ವರದಿಯಾಗಿದೆ. ಹಾಗೆಂದೇ, ಲಿ ಶುಯಿಂಗ್ಗೆ (Lee Xueying) ಪ್ರಪೋಸ್ ಮಾಡಲು ಜಿಂಗ್ಶನ್ (Yang Jingshan) ತನ್ನ ಹುಟ್ಟುಹಬ್ಬವನ್ನು ಆರಿಸಿಕೊಂಡಿದ್ದನು. ಬ್ಯಾಂಕಾಕ್‌ಗೂ ಹೋಗುವ ಪ್ಲಾನ್ ಮಾಡಿಕೊಂಡಿದ್ದರಂತೆ. ಆದರೆ ಯಮರಾಜ ದಂಪತಿಯನ್ನು ಕೈಬೀಸಿ ಕರೆದಿದ್ದಾನೆ . ಅವರು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತುವ ಮುನ್ನ ಇಬ್ಬರೂ ಕಾರು ಅಪಘಾತದಲ್ಲಿ ಅಸುನೀಗಿದ್ದಾರೆ. ಯಾಂಗ್ ಜಿಂಗ್ಶನ್ ಮತ್ತು ಲಿ ಶುಯಿಂಗ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಮರಣ ಹೊಂದಿದರು
ಆ ಯುವ ಜೋಡಿಯ ಎರಡೂ ಕಡೆಯ ಕುಟುಂಬಸ್ಥರು ಒಂದಾಗಿ ಅವರ ಸಾವಿನ ನೋವಲ್ಲೂ ಒಂದು ವಿಶೇಷ ಆಚರಣೆಯನ್ನು ನಡೆಸಲು ನಿರ್ಧರಿಸಿದ್ದಾರೆ. ತಮ್ಮ ಮಕ್ಕಳ ಪ್ರೀತಿಯೆಂಬ ಕೊನೆಯ ಆಸೆಯನ್ನು ಈಡೇರಿಸಲು ‘ಪ್ರೇತ ವಿವಾಹ’ ನಡೆಸಿದ್ದಾರೆ ಇದು ಚೀನಾದ ಸಂಪ್ರದಾಯ. ಈ ಸಂಪ್ರದಾಯದಲ್ಲಿ ಇಬ್ಬರು ಅವಿವಾಹಿತರು ಸತ್ತಾಗ ಅವರ ಆತ್ಮಗಳು ವಿವಾಹದ ಪವಿತ್ರ ಬಂಧದಲ್ಲಿ ಒಂದಾಗುತ್ತವೆ. ಹೀಗೆ ಮಾಡುವುದರಿಂದ ಸಾವಿನ ನಂತರವೂ ಇಬ್ಬರೂ ಪತಿ-ಪತ್ನಿಯಾಗಿ ಶಾಶ್ವತವಾಗಿ ಉಳಿಯುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬುದು ಬಲವಾದ ನಂಬಿಕೆ.
ಜಿಂಗ್ಶನ್ ಮತ್ತು ಲಿ ಶುಯಿಂಗ್ಗೆ ಜೋಡಿಯ ಕುಟುಂಬಸ್ಥರು ಕಳೆದ ಸೋಮವಾರ ಅಂತ್ಯಕ್ರಿಯೆಯ ಸಮಯದಲ್ಲಿ ಅದೇ ಸಭಾಂಗಣದಲ್ಲಿ ಈ ವಿಶಿಷ್ಟ ವಿವಾಹ ಸಮಾರಂಭವನ್ನು ನಡೆಸಿ ಕೊಂಚ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಮೃತ ಯಾಂಗ್ ಜಿಂಗ್ಶನ್ ಮತ್ತು ಲಿ ಶುಯಿಂಗ್ ಜೋಟಿಗೆ ಅಲ್ಲಿ ವಿವಾಹ ನಡೆದಿತ್ತು. ಈ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಅವರಿಬ್ಬರ ಫೋಟೋವನ್ನು ಇಟ್ಟು ಆ ಫೋಟೋಗೆ ಮದುವೆ ಮಾಡಿಸಿದ್ದಾರೆ. ಜಿಂಗ್ಶನ್ ಅವರ ಕುಟುಂಬವು ತಮ್ಮ ಸಂತಾಪ ಸಂದೇಶದಲ್ಲಿ ಲಿ ಶುಯಿಂಗ್ ಳನ್ನು ತಮ್ಮ ಸೊಸೆ ಎಂದು ಒಪ್ಪಿಕೊಂಡಿದ್ದಾರೆ.
