ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗವು ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷದ ಸಂಭ್ರಮದತ್ತ |webnewskannda
ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿಅಮ್ಮನವರ ದೇವಸ್ಥಾನದ ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗವು ನಾಲ್ಕು ವರ್ಷಗಳನ್ನು ಪೂರೈಸಿದ್ದು ಐದನೇ ವರ್ಷದ
ಸಂಭ್ರಮವನ್ನು ಪ್ರತಿವರ್ಷದಂತೆ ಭಜನಾ ಸಾಧಕರ ಕಡೆಗೆ ನಮ್ಮ ನಡಿಗೆ ಎಂಬ ವಿಶೇಷ ಪರಿಕಲ್ಪನೆಯಂತೆ ಶ್ರೀ ಸೋಮೇಶ್ವರ ಮಹಿಳಾ ವೇದಿಕೆ ಮೂಡುಕೇರಿ ಇದರ ಸದಸ್ಯೆ ಶ್ರೀಮತಿ ಗಿರಿಜಾ ಚಂದ್ರಶೇಖರ ಶೆಟ್ಟಿ ಇವರನ್ನು ಅವರ ಮನೆಯಲ್ಲೇ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಅನಂತಪದ್ಮ ನಾಭ ಭಟ್,ಶ್ರೀಮತಿ ಹೇಮಾವತಿ
ಸೀತಾರಾಮ ಶೆಟ್ಟಿ, ಭರತ್ ಕುಮಾರ್, ಅಧ್ಯಕ್ಷರಾದ ಶ್ರೀಮತಿ ವಿಶಾಲ ಮಹೇಶ್ ಪೂಜಾರಿ, ಭಜನಾ ಮಂಡಳಿಯ ಸರ್ವ ಸದಸ್ಯೆಯರು ಉಪಸ್ಥಿತರಿದ್ದರು





