Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಪೋಷಕರೇ ಎಚ್ಚರ, ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮಂಗನ ಬಾವು ಕಾಯಿಲೆ

 

ಪೋಷಕರೇ ಎಚ್ಚರ, ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮಂಗನ ಬಾವು ಕಾಯಿಲೆ

ಸದ್ಯ ಸರ್ಕಾರ ಮಕ್ಕಳಿಗೆ MR ಲಸಿಕೆ ಮಾತ್ರ ನೀಡುತ್ತಿದೆ. MMR ಲಸಿಕೆ ನೀಡುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಮಮ್ಸ್ ವೈರಸ್ ಕಾಟ ಶುರುವಾಗಿದೆ. ಕುತ್ತಿಗೆ ಮೇಲ್ಭಾಗ ಹಾಗೂ ಗದ್ದ ಕಪಾಳದ ಭಾಗ ಬಾವು ಬರ್ತಿದೆ. ಮಕ್ಕಳು ನೋವಿನಿಂದ ನರಳಾಡುತ್ತಿದ್ದಾರೆ.

https://www.webnewskannada.com/
WEBNEWSKANNADA
WebNewsKannada​ | 

Updated on: nov 00, 2023

ಪೋಷಕರೇ ಎಚ್ಚರ ಎಚ್ಚರ! ಮಕ್ಕಳಲ್ಲಿ ಶುರುವಾಗಿದೆ ಮಂಗನ ಬಾವು (Mangana Bavu). ಸಿಲಿಕಾನ್ ಸಿಟಿ ಬೆಂಗಳೂರಿನ ಮಕ್ಕಳಲ್ಲಿ (Children) ಮಮ್ಸ್ ಮಂಗನಬಾವು ವೈರಸ್ ಪತ್ತೆಯಾಗಿದೆ. ಸರ್ಕಾರದ (Government) ದಿವ್ಯ ನಿರ್ಲಕ್ಷ್ಯದಿಂದಾಗಿ ಮಕ್ಕಳಲ್ಲಿ ಮಮ್ಸ್ ವೈರಸ್ ಹಾವಳಿ ಶುರುವಾಗಿದೆ. ಇದರಿಂದ ಕೆಲ ಮಕ್ಕಳಿಗೆ ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ನೋವಿನಿಂದ ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯಬೇಕಾದ ಸ್ಥಿತಿ ಎದುರಾಗಿದೆ.​ ಸರ್ಕಾರ ಮಕ್ಕಳಿಗೆ ಇಂತಹ ಖಾಯಿಲೆ ತಡೆಯುವುದಕ್ಕೆ ಲಸಿಕೆ ಹಾಕಿಸಬೇಕಿತ್ತು. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಖಾಯಿಲೆ ನಿಯಂತ್ರಣಕ್ಕೆ ನೀಡಬೇಕಾದ ಲಸಿಕೆ ನೀಡುವಲ್ಲಿ ನಿರ್ಲಕ್ಷ್ಯವಹಿಸಿದೆ. ಈ ಹಿನ್ನಲೆ ಮಕ್ಕಳಲ್ಲಿ ಈಗ ಹೆಚ್ಚಾಗಿ ಮಮ್ಸ್ ವೈರಸ್ ಕಾಣಿಸಿಕೊಳ್ಳುತ್ತಿದೆ. ಸದ್ಯ ಸರ್ಕಾರ ಮಕ್ಕಳಿಗೆ MR ಲಸಿಕೆ ಮಾತ್ರ ನೀಡುತ್ತಿದೆ. MMR ಲಸಿಕೆ ನೀಡುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಮಮ್ಸ್ ವೈರಸ್ ಕಾಟ ಶುರುವಾಗಿದೆ. ದಿನದಿಂದ ದಿನಕ್ಕೆ ಮಕ್ಕಳಲ್ಲಿ ಈ ವೈರಸ್ ಹೆಚ್ಚಾಗಿ ಕಾಣಸಿಕೊಳ್ಳುತ್ತಿದೆ. ಕುತ್ತಿಗೆ ಮೇಲ್ಭಾಗ ಹಾಗೂ ಗದ್ದ ಕಪಾಳದ ಭಾಗ ಬಾವು ಬರ್ತಿದೆ. ಇದರಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಮಕ್ಕಳು ಪುಲ್ ಹೈರಾಣಾಗುತ್ತಿದ್ದಾರೆ. ಮಮ್ಸ್ ಮಂಗನಬಾವು ಹಾವಳಿ ಕಳೆದ ಎರಡು ವಾರದಿಂದ ಹೆಚ್ಚಾಗಿದೆ. ಮಮ್ಸ್ ಮಂಗನ ಬಾವು ಮಕ್ಕಳಿಂದ ಮಕ್ಕಳಿಗೆ ಬಹು ಬೇಗ ಹರಡುತ್ತಿದೆ. ಈ ಕಾಯಿಲೆ ಬಂದ ಚಿಣ್ಣರಲ್ಲಿ ಜ್ವರ, ಕುತ್ತಿಗೆ ಎರಡು ಕಡೆಗಳಲ್ಲಿ ಊದಿಕೊಳ್ಳುತ್ತವೆ. ಕೆಲವರಿಗೆ ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ  

ಇದನ್ನೂ ಓದಿ: ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ
webnewskannada1

webnewskannada2





Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close