Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ನಾಯಿ ಬೊಗಳಿದ್ದಕ್ಕೆ ಪಕ್ಕದ ಮನೆಯವರ ಮೇಲೆ ಆ್ಯಸಿಡ್​ ಎರಚಿದ ದಂಪತಿ -webnews kannada

 

ನಾಯಿ ಬೊಗಳಿದ್ದಕ್ಕೆ ಪಕ್ಕದ ಮನೆಯವರ ಮೇಲೆ ಆ್ಯಸಿಡ್​ ಎರಚಿದ ದಂಪತಿ

ಶಿವಮೊಗ್ಗ, ಡಿಸೆಂಬರ್​​ 04: ನಾಯಿ (dog) ಬೊಗಳುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಪಕ್ಕದ ಮನೆ ವ್ಯಕ್ತಿ ಮೇಲೆ ದಂಪತಿ ಆ್ಯಸಿಡ್​ ಎರಚಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್​.ಪುರ ತಾಲೂಕಿನ ಹಾಳ್​ ಕರಗುಂದ ಗ್ರಾಮದಲ್ಲಿ ನಡೆದಿದೆ. ಜೇಮ್ಸ್​, ಮರಿಯಮ್ಮರಿಂದ ಸುಂದರ್ ರಾಜ್ ಮೇಲೆ ಆ್ಯಸಿಡ್​​ ದಾಳಿ ಮಾಡಿದ್ದು, ಸುಂದರ್​ರಾಜ್ ಕಣ್ಣು, ಮುಖಕ್ಕೆ ಗಾಯಗಳಾಗಿವೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರೆ.

https://www.webnewskannada.com/
WEBNEWSKANNADA
WebNewsKannada​ | 

Updated on: nov 04, 2023



ಸಾಕು ನಾಯಿ ಬೊಗಳಿದ್ದಕ್ಕೆ ಗಾಯಾಳು ಸುಂದರ್​ ರಾಜ್ ಬೈಯ್ದಿದ್ದ. ನಾಯಿ ಹೆಸರಿನಲ್ಲಿ ಜೇಮ್ಸ್​, ಮರಿಯಮ್ಮಗೆ ಬೈಯ್ಯುತ್ತಿದ್ದ ಎಂದು ಆರೋಪ ಮಾಡಲಾಗಿದೆ. ಸಿಟ್ಟಿಗೆದ್ದು ಸುಂದರಾಜ್​ ಮೇಲೆ ದಂಪತಿ ಆ್ಯಸಿಡ್​ ದಾಳಿ ಮಾಡಿದ್ದಾರೆ. ಸದ್ಯ ದಂಪತಿ ವಿರುದ್ಧ ಎನ್​.ಆರ್​.ಪುರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಜೇಮ್ಸ್​, ಮರಿಯಮ್ಮ ದಂಪತಿ ನಾಪತ್ತೆ ಆಗಿದ್ದಾರೆ.. 

ಇದನ್ನೂ ಓದಿ: ನಿಮ್ಮ ಮೊಬೈಲ್ ದೀರ್ಘ ಸಮಯ ಚಾರ್ಜ್ ಬರಬೇಕಾ?: ಈ ಟ್ರಿಕ್ ಫಾಲೋ ಮಾಡಿ
webnewskannada1

webnewskannada2





Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close