ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆ : ನಂಚಾರು ಗೋಶಾಲೆಯಲ್ಲಿ: ರುಡ್‌ಸೆಟ್ ಆಸರೆ ಸಂಘಟನೆಯಿಂದ ಆಚರಣೆ webnews kannada
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆ : ನಂಚಾರು ಗೋಶಾಲೆಯಲ್ಲಿ: ರುಡ್‌ಸೆಟ್ ಆಸರೆ ಸಂಘಟನೆಯಿಂದ ಆಚರಣೆ webnews kannada
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆ : ನಂಚಾರು ಗೋಶಾಲೆಯಲ್ಲಿ: ರುಡ್‌ಸೆಟ್ ಆಸರೆ ಸಂಘಟನೆಯಿಂದ ಆಚರಣೆ ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75ನೇ ಜನ್ಮದಿನ ವನ್ನು ಬ್ರಹ್ಮಾವರ ರುಡ್ ಸೆಟ್ ಸಂಸ್ಥೆ ಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಸಂಘಟನೆಯಾದ ರುಡ್ ಸೆಟ್ ಆಸರೆ ಸಂಘಟನೆ ಯ ವತಿಯಿಂದ ನಂಚಾರಿನ ಶ್ರೀ ಕಾಮಧೇನು ಗೋಶಾಲಾ ಮಹಾ ಸಂಘ ಟೆಸ್ಟ್ç, ನಂಚಾರಿನ ಗೋಶಾಲೆಯಲ್ಲಿ ಆಚರಿಸಲಾಯಿತು. ಮೊದಲಿಗೆ ಗೋಶಾಲೆಯಲ್ಲಿ ಇರುವ ಸುಮಾರು ೨೦೦ ಗೋವುಗಳಿಗೆ ಹೂವಿನ ಹಾಕಿ ಶೃಂಗಾರ ಮಾಡಿ, ಹರಶಿನ-ಕುಂಕುಮ ಹಚ್ಚಿ, ಆರತಿ ಮಾಡಿ ನವಧ್ಯಾನಗಳಿಂದ ಕೂಡಿದ ಆಹಾರವನ್ನು ಪ್ರತಿಯೊಂದು ಹಸುವಿಗೆ ನೀಡಿ, ಜೊತೆ ಗೋವುಗಳಿಗೆ ಬೇಕಾದ ಪಶು ಆಹಾರ(ಹಿಂಡಿ), ಒಣ ಹುಲ್ಲು , ಸಹಾಯಧನ, ಗೋಶಾಲೆಗೆ ನೀಡಲಾಯಿತು.
.jpeg)
WEBNEWSKANNADA
WebNewsKannada |
Updated on: nov 00, 2023
ನಂತರ ವೇದಿಕೆಯಲ್ಲಿ ದೀಪ ಬೆಳಗಿಸಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಶುಭಾಶಯ ಕೋರಿ ರುಡ್‌ಸೆಟ್ ಸಂಸ್ಥೆಯ ನಿರ್ದೆಶಕರಾದ ಲಕ್ಷ್ಮೀಶ ಎ. ಜಿ ಮಾತನಾಡಿದರು.
ನಾಡಿನ ಅತೀ ಅಮೂಲ್ಯವಾದ ಸಂಪತ್ತು ಗೋವುಗಳು, ಅವುಗಳಿಗೆ ಆಹಾರ ಒದಗಿಸುವುದರ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನ್ಮದಿನವನ್ನು ರುಡ್ ಸೆಟ್ ಆಸರೆ ಸಂಘಟನೆ ಆಚರಿಸುತಿರುವುದು ಅರ್ಥಪೂರ್ಣ ಕಾರ್ಯಕ್ರಮ ಎಂದು ಶುಭ ಹಾರೈಸಿದರು. ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ್ ಜೈನ್ ಮಾತನಾಡಿ, ಹಲವಾರು ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕನಸು ಕಂಡು ನನಸು ಮಾಡುತ್ತಿರುವ ನಮ್ಮ ಸಂಸ್ಥೆ ಮತ್ತು
ಸಮಾಜದ ಹೆಮ್ಮೆಯ ದಾರ್ಶನಿಕರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75ರ ಹುಟ್ಟು ಹಬ್ಬವನ್ನು ಕಾಮಧೇನು ಆಗಿರುವ ಗೋವಿನ ಸೇವೆಯೊಂದಿಗೆ ರುಡ್ ಸೆಟ್ ಆಸರೆ ಸಂಘಟನೆ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕ ಎಂದರು. ಹಾಗೂ ರುಡ್ ಸೆಟ್ ಸಂಸ್ಥೆಯ ತರಬೇತಿ ಕಾರ್ಯಕ್ರಮ ಮೂಲಕ ದೇಶ ಲಕ್ಷಾಂತರ ಜನ ನಿರುದ್ಯೋಗಿ ಯುವಕ-ಯುವತಿರಿಗೇ ಅನ್ನದಾತರಾಗಿದ್ದರೆ. ರುಡ್ ಸೆಟ್ ಸಂಸ್ಥೆಯ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿ, ಅಂತಹ ಪುಣ್ಯಾತ್ಮರ ಜನ್ಮ ದಿನವನ್ನು ಆಚರಿಸುವ ಸೌಭಾಗ್ಯ ಎಂದು ಹೇಳಿ ಶುಭ ಹಾರೈಸಿದರು. ಆಸರೆ ಸಂಘಟನೆಯ ಗೌರಧ್ಯಕ್ಷರಾದ ರಾಜೇಶ್ ದೇವಾಡಿಗ ಮಾತನಾಡಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ಸಮಾಜ ಬೇರೆ ಬೇರೆ ಕಡೇಯಲ್ಲಿ ಆದರಲ್ಲಿ ಗೋಸೇವೆಯ ಇದು ಮಹತ್ವವಾದ ಕಾರ್ಯಕ್ರಮ ಎಂದರು. ಆಸರೆ ಸಂಘಟನೆಯ ಮಾಜಿ ಅಧ್ಯಕ್ಷರು, ಉದ್ಯಮಿಗಳು ಆದ ಕೆ. ಸಿ. ಅಮೀನ್ ಮಾತನಾಡಿ ಡಾ. ಡಿ.ವೀರೇಂದ್ರ ಹೆಗ್ಗೆಡೆಯವರು ರುಡ್ ಸೆಟ್ ಸಂಸ್ಥೆಯನ್ನು ಆರಂಭಿಸಿದ ಕಾರಣ ಇಂದು ದೇಶಾದ್ಯಾಂತ ಲಕ್ಷಾಂತರ ಯುವಕ-ಯುವತಿಯರು ಬದುಕು ಕಟ್ಟಿಕೊಳ್ಳವಂತಾಗಿ ಎಂದು ಶುಭ ಕೋರಿದರು.
ಕರ್ನಾಟಕ ಬ್ಯಾಂಕಿನ ನಿವೃತ್ತ ಅಧಿಕಾರಿಯಾದ ಚಂದ್ರಶೇಖರ ನಾವುಡ ಮಾತನಾಡಿ ರುಡ್ ಸೆಟ್ ಆಸರೆ ಸಂಘಟನೆಯ ಇಂದಿನ ಕಾರ‍್ಯಕ್ರಮ ಅತ್ಯತ್ತಮವಾದ್ದು ಎಂದು ಶುಭ ಹಾರೈಸಿದರು. ಶ್ರೀ ಕಾಮಧೇನು ಗೋಶಾಲಾ ಮಹಾ ಸಂಘ ಟೆಸ್ಟ್ç ನ ಪ್ರಮುಖರಾದ ರಾಜೇಂದ್ರ ಚಕ್ಕರೆ ಅವರು ಮಾತನಾಡಿ ಪರಮ ಪೂಜ್ಯ ಖಾವಂದರ ಜನ್ಮದಿನ ಕಾರ್ಯಕ್ರಮ ಗೋಸೇವೆಯ ಮೂಲಕ ಆಚರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ತಮ್ಮೆಲ್ಲರ ಸಹಕಾರ ಇರಲಿ ಎಂದರು. ಆಸರೆ ಸಂಸಘಟನೆಯ ಅಧ್ಯಕ್ಷರಾದ ಶ್ರೀಮತಿ ಹರಿಣಿ ಅಜಯ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾದ ಸುಲೇಖವರ , ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ ಶೆಟ್ಟಿ, ರವಿ ಸಾಲ್ಯಾನ್, ಬ್ಯೂಟೀಶಿಯನ್ ತರಬೇತಿಯ ಗೌರವ ಉಪನ್ಯಾಸಕಿಯಾದ ಶ್ರೀಮತಿ ಪ್ರೀತಿ, ಆಸರೆ ಸಂಘಟನೆಯ ಬಿ.ಕುಶ, ಪ್ರವೀಣ್ ಮಲ್ಪೆ, ಶ್ರೀಮತಿ ರಾಜಲಕ್ಷೀ, ಶ್ರೀಮತಿ ಸುಜ್ಯೋತಿ, ಶ್ರೀಮತಿ ನಾಗರತ್ನ, ಕುಮಾರಿ ಶಾರಾದ, ಕುಮಾರಿ ರಾಗಿಣಿ, ಕುಮಾರಿ ಭವ್ಯ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆಸರೆ ಸಂಘಟನೆಯ ಕಾರ‍್ಯದರ್ಶಿ ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿಯಾದ ಶ್ರೀ ವೆಂಕಟೇಶ ನಾಯ್ಕೆ ವಂದಿಸಿದರು. ಗೋಸೇವೆಯಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಬ್ಯೂಟಿಶೀಯನ್ ಮತ್ತು ರೇಫ್ರಿಜರೇಟರ್ ಮತ್ತ ಎಸಿ ರಿಪೇರಿಯ ಶಿಭಿರಾರ್ಥಿಗಳು ಭಾಗವಹಿಸಿದ್ದರು.



.jpeg)

