Dasara 2023: ಮನೆಯಲ್ಲೇ ಕುಳಿತು ಮೈಸೂರು ದಸರಾ ಕಣ್ತುಂಬಿಕೊಳ್ಳಿ! ವರ್ಚುವಲ್ ವೀಕ್ಷಣೆಗಾಗಿ ಈ ಲಿಂಕ್ ಬಳಸಿ
Dasara 2023: ಮನೆಯಲ್ಲೇ ಕುಳಿತು ಮೈಸೂರು ದಸರಾ ಕಣ್ತುಂಬಿಕೊಳ್ಳಿ! ವರ್ಚುವಲ್ ವೀಕ್ಷಣೆಗಾಗಿ ಈ ಲಿಂಕ್ ಬಳಸಿ
‘ವಿಶ್ವವಿಖ್ಯಾತ ಮೈಸೂರು (Mysuru) ದಸರಾ ನಾಳೆಯಿಂದ ಶುರುವಾಗಲಿದೆ. ದಸರಾ (Dasara) ಮಹೋತ್ಸವ 2023 ರ ಉದ್ಘಾಟನೆಯನ್ನು ನಾದಬ್ರಹ್ಮ ಡಾ.ಹಂಸಲೇಖ ಅವರು ಚಾಮುಂಡಿ ದೇವಿಯ ಅಗ್ರ ಪೂಜೆಯೊಂದಿಗೆ, ನಾಳೆ ಬೆಳಿಗ್ಗೆ 10.15 ರಿಂದ 10.36ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸಲಿದ್ದಾರೆ.

WEBNEWSKANNADA
WebNewsKannada |
Updated on: Oct 14, 2023
ದಸರಾ ಕಾರ್ಯಕ್ರಮಗಳನ್ನು ವರ್ಚುವಲ್ ಮೂಲಕವೂ ನೋಡಬಹುದು ಇನ್ನು ದಿನಾಂಕ:24-10-2023 ರಂದು ಮಂಗಳವಾರ ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 4.40 ರಿಂದ 5.00 ರವರೆಗೆ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.ಫೇಸ್‍ಬುಕ್, ಯೂಟ್ಯೂಬ್‍ನಲ್ಲಿ ನೋಡಿದಸರಾ ಕಾರ್ಯಕ್ರಮಗಳು ಫೇಸ್‍ಬುಕ್, ಯೂಟ್ಯೂಬ್ ಮತ್ತು ವೆಬ್‍ಸೈಟ್‍ನಲ್ಲಿ ನೋಡಬಹುದು. ದಿನಾಂಕ: 15-10-2023 ರಿಂದ 24-10-2023 ರವರಗೆ ನೇರ ಪ್ರವಾಸವಾಗಲಿದೆ. ಈ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್‍ಗಳನ್ನು ಬಳಸಿ.
ಕೆಳಗಿನ ಲಿಂಕ್ನಲ್ಲಿ ವೀಕ್ಷಿಸಬಹುದು
Facebook Link https://facebook.mysoredasara.gov.in
YouTube Link
https://youtube.mysoredasara.gov.in
Website Link
https://youtube.com/live/xQ5taMEzVpk?feature=share.



