Karavalivani : 2,000 ನೋಟು ಬದಲಾವಣೆಗೆ20 ದಿನ ಮಾತ್ರ! 2,000 ಮುಖಬೆಲೆ ನೋಟುಗಳನ್ನು ಬದಲಾಯಿಸಲು ಕೇವಲ 20 ದಿನಗಳು ಮಾತ್ರ ಉಳಿದಿವೆ. RBI ಮೇ.19 ರಂದು 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿತ್ತು. ಈ ಬಗ್ಗೆ ಬದಲಾವಣೆ ಮಾಡಿಕೊಳ್ಳಲು ಸೆ. 30 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇರುವುದರಿಂದ ಆದಷ್ಟು ಬೇಗನೆ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು RBI ತಿಳಿಸಿದೆ.