ಸಾಕು ಪ್ರಾಣಿಗಳ ಜೊತೆಗೆ ಎಚ್ಚರಿಕೆ ಅಗತ್ಯ – ಡಾ| ಅರುಣ್‌ಕುಮಾರ್ ಶೆಟ್ಟಿ-karavalivani
@karavalivani, @ಕರಾವಳಿವಾಣಿ-ಕೋಟ: ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಪ್ರಾಣಿ ದಯಾಸಂಘ ಉಡುಪಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ರೇಬಿಸ್ (ಹುಚ್ಚು ನಾಯಿ ರೋಗ) ಮತ್ತು ಇತರ ಪ್ರಾಣಿ ಜನ್ಯರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಪಶುಸಂಗೋಪನೆಯ ಹಿರಿಯ ವೈದ್ಯಾಧಿಕಾರಿ ಡಾ| ಅರುಣ್‌ಕುಮಾರ್ ಶೆಟ್ಟಿಯವರು ಪ್ರಾಣಿಗಳ ಪ್ರೀತಿಯ ಜೊತೆಗೆ ಅವುಗಳ ಕುರಿತು ಎಚ್ಚರಿಕೆಯೂ ಅಗತ್ಯ ಎಂದು ತಿಳಿಸಿದರು. ಪಶುವೈದ್ಯಾಧಿಕಾರಿಗಳಾದ ಮಂಜುನಾಥ್ ಅಡಿಗ ಹಾಗೂ ಪ್ರದೀಪ್ ಕೊಂಡೊಜಿಯವರು ಹುಚ್ಚುನಾಯಿ ರೋಗದ ಕುರಿತು ದೃಕ್‌ಶ್ರವಣದ ಮೂಲಕ ಮಕ್ಕಳಿಗೆ ಮನದಟ್ಟು ಮಾಡಿ ಜಾಗೃತಿ ಮೂಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳರವರು ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವಿಜ್ಞಾನ ಕ್ಲಬ್‌ನ ಕಾರ್ಯದರ್ಶಿ ಎನ್. ತ್ರಿಶಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಜ್ಞಾನ ಕ್ಲಬ್ ಅಧ್ಯಕ್ಷೆ ತ್ರಿಶಾರವರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಾಧಾಕೃಷ್ಣ ಭಟ್‌ರವರು ಕಾರ್ಯಕ್ರಮ ಸಂಯೋಜಿಸಿದರು.

