ಮಧುಮೇಹ'(Diabetes In Kannada) ರೋಗಿಗಳಿಗೆ ಸಿಹಿ ಸುದ್ದಿ-karavalivani
WebNews Kannada
17 ಸೆಪ್ಟೆಂ, 2022
ಈ ಸುದ್ದಿ ಓದಲು ಕ್ಲಿಕ್ ಮಾಡಿ
@karavalivani, @ಕರಾವಳಿವಾಣಿ
ಸಕ್ಕರೆ ಕಾಯಿಲೆ ಎಲ್ಲೆಲ್ಲೂ ಪ್ರವರ್ಧಮಾನಕ್ಕೆ ಬಂದಿರುವ ಶ್ರೀಮಂತ ಕಾಯಿಲೆ. ಹೌದು ಬರಿಯ ಶ್ರೀಮಂತರನ್ನು ಮಾತ್ರ ಕಾಡಿಸುತ್ತಿದ್ದ ಈ ಕಾಯಿಲೆ ಈಗೀಗ ಬಡವರತ್ತ ಕೂಡ ತನ್ನ ಚೂಪು ನೋಟ ಹರಿಸಿದೆ. ಆಹಾರದಲ್ಲಿ ಪಥ್ಯ ಮಾಡುತ್ತಾ ಸಿಹಿತಿಂಡಿ ಕಣ್ಣೆದುರೇ ಇದ್ದರೂ ತಿನ್ನಲಾಗದಂತಹ ಸ್ಥಿತಿ ಈ ಸಕ್ಕರೆ ಕಾಯಿಲೆ ಉಂಟು ಮಾಡುತ್ತದೆ.
ಮಧುಮೇಹ ಕಾಯಿಲೆಯ ಪ್ರಮಾಣ ಆಧುನಿಕ ಜೀವನ ಶೈಲಿಯಿಂದಾಗಿ ಹೆಚ್ಚಾಗುತ್ತಿದೆ. ಹಾಗಾಗಿ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಉಪಕಾರಿಯಾಗಿದೆ.
ಮಧುಮೇಹ ಕಾಯಿಲೆಯ ಪ್ರಮಾಣ ಆಧುನಿಕ ಜೀವನ ಶೈಲಿಯಿಂದಾಗಿ ಹೆಚ್ಚಾಗುತ್ತಿದೆ. ಹಾಗಾಗಿ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಉಪಕಾರಿಯಾಗಿದೆ.
ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇಂದು ಸಾಮಾನ್ಯವಾಗಿದೆ. ಒತ್ತಡದ ಜೀವನ, ಆಹಾರ ಅಭ್ಯಾಸ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಒಮ್ಮೆ ಮಧುಮೇಹಕ್ಕೆ ತುತ್ತಾದರೆ ಜೀವನ ಪರ್ಯಂತ ಮಾತ್ರೆ ಸೇವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಮಧುಮೇಹ ರೋಗಿಗಳು ಸೇವಿಸುವ 'ಸಿಟಾಗ್ಲಿಫ್ಟಿನ್' ಎಂಬ ಮಾತ್ರೆಯನ್ನು ಶುಕ್ರವಾರದಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕೇವಲ ಅರವತ್ತು ರೂಪಾಯಿಗಳಿಗೆ 10 ಮಾತ್ರೆಗಳ ಪ್ಯಾಕ್ ನಲ್ಲಿ ದೊರೆಯಲಿದೆ.
ಭಾರತೀಯ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಸಂಸ್ಥೆ ಈ ಔಷಧವನ್ನು ಬಿಡುಗಡೆ ಮಾಡಿದ್ದು, 50 ಎಂಜಿ ಮತ್ತು 100 ಎಂಜಿ ಡೋಸ್ ಗಳಲ್ಲಿ ಇದು ದೊರೆಯಲಿದೆ.
ಸಿಟಾಗ್ಲಿಫ್ಟಿನ್ ಫಾಸ್ಫೇಟ್ 50 ಎಂಜಿ ಮಾತ್ರೆಯ ಹತ್ತು ಮಾತ್ರೆಗಳಿಗೆ 60 ರೂಪಾಯಿಗಳಾಗಿದ್ದರೆ, 100 ಎಂಜಿ 10 ಮಾತ್ರೆಗಳಿಗೆ ನೂರು ರೂಪಾಯಿಗಳಾಗಿದೆ. ಇವುಗಳು ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.
karavalivaninews
.jpg)
