ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆಯ ಮಹಾಸಭೆ ಪ್ರಯುಕ್ತ ಗಿಡ ವಿತರಣೆ- karavalivani
ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆಯ ವಾರ್ಷಿಕ ಮಹಾಸಭೆಯ ಅಂಗವಾಗಿ ಭಾಗವಹಿಸಿದ ಸಮಾಜಬಾಂಧವರಿಗೆ ವಿವಿಧ ಸಸ್ಯಗಳ ವಿತರಿಸಲಾಯಿತು, ಶ್ರೀಗುರುನರಸಿಂಹನ ಸನ್ನಿಧಾನದ ವಠಾರದಲ್ಲಿರುವ ತೋಟದಲ್ಲಿ ಸಸಿ ನೆಡುವುದರ ಮೂಲಕ ಮಹಾಸಭೆಯನ್ನು ಹಸಿರಿನೊಂದಿಗೆ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಶ್ರೀಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್. ಕಾರಂತ, ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ತುಂಗ, ಕೂ.ಮ.ಜ ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ಕೂ.ಮ.ಜ ಸಾಲಿಗ್ರಾಮ ಅಂಗಸoಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಕಾರ್ಯದರ್ಶಿ ಮಹಾಬಲ ಹೇರ್ಳೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಂಜುನಾಥ ಉಪಾಧ್ಯ ಮತ್ತು ಚಂದ್ರಶೇಖರ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

