ಮತ್ತೆ ಮೇಳೈಸಲಿದೆ ಗೋವಿಗಾಗಿ ಮೇವು ಕಾರ್ಯಕ್ರಮ-karavalivani
ಕೋಟ: ಉಡುಪಿ ಜಿಲ್ಲೆಯ ಗೋವಿಗಾಗಿ ಮೇವು ತಂಡ ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗಗಳ ಗೋ ಶಾಲೆಗೆ ವಿವಿಧ ಕಡೆಗಳಿಂದ ಸಂಗ್ರಹಿಸಲಾಗುತ್ತಿರುವ ಮೇವುಗಳನ್ನು ನೀಡುತ್ತಿದ್ದು ಇದರ ಕಾವು ಇದೀಗ ರಾಜ್ಯಾದ್ಯಂತ ಪಸರಿಸಿಕೊಂಡಿದೆ. ಈ ಹಿನ್ನಲ್ಲೆಯಲ್ಲಿ ಇದೇ ಬರುವ ಆ.14ರಿಂದ ದೊಡ್ಡ ಮಟ್ಟದ ಮೇವು ಅಭಿಯಾನ ಆರಂಭಗೊಳ್ಳಲಿದ್ದು ಇದರ ಪೂರ್ವ ಭಾವಿ ಸಭೆ ಕೋಟ ಹಿರೇಮಹಾಲಿಂಗೇಶ್ವರ ದೇವಳದ ಓಲಗ ಮಂಟಪದಲ್ಲಿ ನಡೆಯಿತು.
ಗೋವಿಗಾಗಿ ಮೇವು ಕೋಟ- ಸಾಲಿಗ್ರಾಮ ವಲಯದಲ್ಲಿ ಕಾರ್ಯಕ್ರಮದ ರೂಪುರೇಖೆಯನ್ನು ಗೋವಿಗಾಗಿ ಮೇವು ಸ್ಥಾಪಕರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪ್ರಕ್ರೀಯೆ ನಡೆಯಿತು. ಗೋವಿಗಾಗಿ ಮೇವು ಚಿಕ್ಕಮಗಳೂರು ಉಸ್ತುವಾರಿ ನಾಗೇಂದ್ರ ಪುತ್ರನ್ ,ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೋಟ,ಕೋಟ ವಲಯ ನೂತನ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಮರಕಾಲ,ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್,ಗೌರವಾಧ್ಯಕ್ಷರಾಗಿ ಉಮೇಶ್ ಪೂಜಾರಿ,ಕೋಟ -ಸಾಲಿಗ್ರಾಮ ವಲಯದ ಮಹಿಳಾ ಅಧ್ಯಕ್ಷೆ ವಿದ್ಯಾ ಸಾಲ್ಯಾನ್ ಪಡುಕರೆ, ಸುಜಾತ ಬಾಯಿರಿ,ಕಿರಣ್ ಸಾಲಿಗ್ರಾಮ ಆಯ್ಕೆಗೊಳಿಸಲಾಯಿತು.
ಗೋವಿಗಾಗಿ ಮೇವು ಕೋಟ- ಸಾಲಿಗ್ರಾಮ ವಲಯದಲ್ಲಿ ಕಾರ್ಯಕ್ರಮದ ಪೂರ್ವ ಭಾವಿ ಸಭೆ ಕೋಟ ಹಿರೇಮಹಾಲಿಂಗೇಶ್ವರ ದೇವಳದ ಓಲಗ ಮಂಟಪದಲ್ಲಿ ನಡೆಯಿತು. ಗೋವಿಗಾಗಿ ಮೇವು ಸ್ಥಾಪಕರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಗೋವಿಗಾಗಿ ಮೇವು ಚಿಕ್ಕಮಗಳೂರು ಉಸ್ತುವಾರಿ ನಾಗೇಂದ್ರ ಪುತ್ರನ್,, ,ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


