ಹೆಸಕುತ್ತೂರು -ವಲಯ ಮಟ್ಟದ ಯೋಗಾಸನ ಸ್ಪರ್ಧೆ-karavalivani
ಕೋಟ: ಯೋಗವು ನಮ್ಮ ದೈಹಿಕ, ಮಾನಸಿಕ
ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಪೂರಕ, ಶಾಲೆಗಳಲ್ಲಿ
ಕೈಗೊಳ್ಳುವ ಯೋಗಾಸನ ಸ್ಪರ್ಧೆಗಳು ಯೋಗದ
ಕುರಿತಾದ ಅರಿವು ಮತ್ತು ಆಸಕ್ತಿಯನ್ನು ಹೆಚ್ಚಿಸುವಲ್ಲಿ
ಕೊಡುಗೆ ನೀಡುವಂತಾಗಲಿ ಎಂದು ಕೊರ್ಗಿ ಗ್ರಾಮ
ಪಂಚಾಯತ್ ಅಧ್ಯಕ್ಷ ಗೌರೀಶ ಹೆಗಡೆ ನುಡಿದರು.
ಅವರು ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ
ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ
ಕಚೇರಿ ಕುಂದಾಪುರ ಇವರ ವತಿಯಿಂದ ಸರಕಾರಿ
ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು ಇವರ
ಆಶ್ರಯದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ
ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ
ಮಾತನಾಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ,
ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ
ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ.ಕೆ.ಎಸ್,
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ
ದತ್ತಾತ್ರೇಯ ನಾಯಕ್ ,ಉದ್ಯಮಿ ಜಿ.ಪ್ರಸಾದ್
ಕಾಂಚನ್, ಶಿರಿಯಾರ ಗ್ರಾಮ ಪಂಚಾಯತ್ ಸದಸ್ಯ
ರಾಘವೇಂದ್ರ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ
ಸಂಘದ ಕುಂದಾಪುರ ತಾಲೂಕು ಶಾಖೆಯ ಅಧ್ಯಕ್ಷ
ಗಣೇಶ್ ಕುಮಾರ್ ಶೆಟ್ಟಿ, ಅಂಪಾರು ವೃತ್ತ ಮಟ್ಟದ
ಶಿಕ್ಷಣ ಸಂಯೋಜಕರಾದ ಶಂಕರ್.ಎಸ್, ಸರಕಾರಿ
ಪ್ರೌಢಶಾಲೆ ಹೇಸಕುತ್ತೂರು ಇದರ ಮುಖ್ಯ ಶಿಕ್ಷಕ
ಅಬ್ದುಲ್ ರವೊಷ್, ನಿವೃತ್ತ ಮುಖ್ಯ ಶಿಕ್ಷಕರಾದ
ಸಂತೋಷ ಶೆಟ್ಟಿ ಹುಣಸೆಮಕ್ಕಿ, ಸಮೂಹ
ಸಂಪನ್ಮೂಲ ವ್ಯಕ್ತಿ ವಸಂತ.ಬಿ ,ಪ್ರೌಢಶಾಲಾ ದೈಹಿಕ
ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ,
ಸ್ಥಳೀಯ ಹಿರಿಯರಾದ ಕೊರಗಯ್ಯ ಶೆಟ್ಟಿ, ಸಂಜೀವ
ಕುಲಾಲ, ಪೋಷಕ ಪ್ರತಿನಿಧಿಗಳಾದ ಸುವಾಸಿನಿ
ಸಂತೋಷ್ ಪ್ರಸಾದ್ ಶೆಟ್ಟಿ, ರಕ್ಷಿತಾ ಜಯರಾಮ
ಕೆದೂರು, ಶಾಲಾ ಶಿಕ್ಷಕರಾದ ಜಯಲಕ್ಷ್ಮಿ ಬಿ,
ಜಯರಾಮ ಶೆಟ್ಟಿ, ವಿಜಯ , ಗೌರವ ಶಿಕ್ಷಕಿ ಮಧುರ
ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶೇಖರ
ಕುಮಾರ್ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ
ಸಂಜೀವ ಮೊಗವೀರ ವಂದಿಸಿದರು. ಸಹ ಶಿಕ್ಷಕರಾದ
ಅಶೋಕ ತೆಕ್ಕಟ್ಟೆ ಮತ್ತು ರವೀಂದ್ರ ನಾಯಕ್
ವಂದಿಸಿದರು.
ವಾಟ್ಸಾಪ್ ಟ್ರಿಕ್ಸ್..

