ಅಮೃತ್ ಮಹೋತ್ಸವ ಅಂಗವಾಗಿ ಮಣಿಪಾಲದ ಮಾಹೆಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ವತಿಯಿಂದ ನಶಾ ಮುಕ್ತಾ ಕಾರ್ಯಕ್ರಮ ಆಯೋಜನೆ-karavalivani
ಕೋಟ: ಮಣಿಪಾಲದ ಮಾಹೆಯ ವಿದ್ಯಾರ್ಥಿ
ಕ್ಷೇಮಾಭಿವೃದ್ಧಿ ವಿಭಾಗ ಆಜಾದಿಕಾ ಅಮೃತ್
ಮಹೋತ್ಸವ ಅಂಗವಾಗಿ ನಶೆಯಿಂದ ಮುಕ್ತಿ ಎಂಬ
ಧ್ಯೇಯ ವಾಕ್ಯದೊಂದಿಗೆ ಕಾಲ್ನಡಿಗೆ ಜಾಥಾ ಹಾಗೂ
ವಿವಿಧ ಕಾರ್ಯಕ್ರಮಗಳನ್ನು ಸರಕಾರಿ ಸಂಯುಕ್ತ
ಪ್ರೌಢಶಾಲೆ ಕೋಟ ಪಡುಕರೆ ಇಲ್ಲಿ ಹಮ್ಮಿಕೊಂಡಿತು.
ಈ ಕಾಲ್ನಡಿಗೆ ಜಾಥಾವನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತ ಆನಂದ್ ಸಿ ಕುಂದರ್ ಹಸಿರು ಪತಾಕೆಯನ್ನು
ತೋರಿಸುವುದರ ಮೂಲಕ ಚಾಲನೆಯನ್ನು ನೀಡಿ
ಮಾತನಾಡಿ ಸ್ವಾತಂತ್ರ್ಯದಮಹತ್ವ ಮತ್ತು ನಶೆಯಿಂದ
ದೂರವಿರುವಲ್ಲಿ ನಮ್ಮ ಜವಾಬ್ದಾರಿ ಕುರಿತು ನಮ್ಮ
ಅನಿಸಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲೆಯ
ಮುಖ್ಯೋಪಾಧ್ಯಾಯ ನಿರಂಜನ್ ನಾಯಕ್ ಮಾತನಾಡಿ
ನಶೆಯ ವಿಚಾರದಲ್ಲಿ ಮಕ್ಕಳು ಈ ವಿಚಾರದಲ್ಲಿ
ಜಾಗೃತರಾಗುವುದು ಅತ್ಯಗತ್ಯ ಇಲ್ಲವಾದಲ್ಲಿ ಮುಂದೆ
ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ
ಕರೆನೀಡಿದರು.
ವಿದ್ಯಾರ್ಥಿಗಳು ಆಪ್ತ ಸಮಾಲೋಚಕರು ಮಣಿಪಾಲ
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರುಗಳು
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್
ಪ್ರಾಧ್ಯಾಪಕ ಡಾ. ಬಿನಿಲ್ ಹಾಗೂ ಮಣಿಪಾಲ್
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕ ರೋಷನ್
ಜತನ್, ಕೋಟ ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ
ಪೂರ್ಣಿಮಾ ಅಧಿಕಾರಿ, ಉಪಸ್ಥಿತರಿದ್ದರು. ವಿದ್ಯಾರ್ಥಿ
ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರಾದ ಗೀತಾ ಮಯ್ಯ
ಸ್ವಾಗತಿಸಿದರೆ, ಡಾ.ರಾಯನ್ ಮಥಾಯಾಸ್
ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.
ವಾಟ್ಸಾಪ್ ಟ್ರಿಕ್ಸ್..

