ಸಾಲಿಗ್ರಾಮ ಅಮೃತಮಹೋತ್ಸವದ ಹರ್ ಘರ್ ತಿರಂಗ ಅಭಿಯಾನ ಮಳಿಗೆ ಉದ್ಘಾಟನೆ - karavalivani
ಕೋಟ: ಸ್ವಾತಂತ್ರೋತ್ಸವ 75 ನೇ ವರ್ಷದ ಅಮೃತಮಹೋತ್ಸವದ "ಹರ್ ಘರ್ ತಿರಂಗ" ಅಭಿಯಾನದ ಪ್ರಯುಕ್ತ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ರಾಷ್ಟ್ರ ಧ್ವಜ ಮಾರಾಟ ಮಳಿಗೆಯನ್ನು ಬುಧವಾರ ತೆರೆಯಲಾಯಿತು.ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ ಮಳಿಗೆಯನ್ನು ಉದ್ಘಾಟಿಸಿದರು.ಈ ವೇಳೆ ಹಿರಿಯ ನಾಗರೀಕ ತಿಮ್ಮಪ್ಪ ದೇವಾಡಿಗ ಕಾರ್ಕಡ ಇವರಿಗೆ ರಾಷ್ಟ್ರಧ್ವಜ ನೀಡುವುದರ ಮೂಲಕ ಸಾಂಕೇತಿಕವಾಗಿ ಮಾರಾಟಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ "ಹರ್ ಘರ್ ತಿರಂಗ" ಅಭಿಯಾನದ ನೋಡೆಲ್ ಅಧಿಕಾರಿ ಪ.ಪಂ ಮುಖ್ಯಾಧಿಕಾರಿ ಶಿವ ನಾಯ್ಕ್, ನೋಡೆಲ್ ಅಧಿಕಾರಿ ಮಮತಾ, ಕಿರಿಯ ಅಭಿಯಂತರ ರಾಜಶೇಖರ, ಪಟ್ಟಣ ಪಂಚಾಯತ್ ಸಿಬ್ಬಂದಿಯವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

