ತೆಕ್ಕಟ್ಟೆ,ಕೋಟ ಭಾಗದಲ್ಲಿ ಮತ್ತೆ ಮಳೆಯ ಅಬ್ಬರ, ಇಳಿದ ನೆರೆ ಪುನಹ ಏರುವ ಭೀತಿ -today news karavalivani
ಕೋಟ: ಕಳೆದೊಂದು ವಾರದಿಂದ ನಿರಂತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕೋಟ ಹೋಬಳಿ ಪ್ರದೇಶ ಸಾಕಷ್ಟು ಭಾಗಗಳು ನೆರೆ ಪೀಡಿತ ಪ್ರದೇಶಗಳಾಗಿ ರೂಪುಗೊಂಡಿದ್ದು ಮಳೆಯ ಗುರುವಾರ ತೀವ್ರತೆ ಕಡಿಮೆಗೊಂಡರೂ ಶುಕ್ರವಾರ ಮತ್ತೆ ವರುಣರಾಯನ ಅಬ್ಬರ ಯಥಾಸ್ಥಿತಿಗೆ ತಲುಪಿದೆ (Rain again in Thekkatte, Kota area, fear of falling Nere Puna again rising -today news karavalivani)ಈ ಹಿನ್ನಲ್ಲೆಯಲ್ಲಿ ಇಳಿದ ನೆರೆ ಮತ್ತೆ ಏರತೊಡಗಿದ್ದು ಮತ್ತೆ ಆತಂಕ ಮನೆ ಮಾಡಿದೆ ,ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಮತ್ತು ಮಲ್ಯಾಡಿ ಭಾಗಗಳಲ್ಲಿ ನೆರೆ ಹಾವರಿಸಿಕೊಂಡಿದ್ದು ಕೆಲವಾರು ಮನೆಗಳು ಜಲಾವೃತಗೊಂಡಿವೆ.ಈ ಭಾಗಗಳಿಗೆ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಅಧಿಕಾರಿವರ್ಗ ಭೇಟಿ ನೀಡಿ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುತ್ತಿದೆ.ಅದೇ ರೀತಿ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಯ್ಕೂರು,ಗಿಳಿಯಾರು,ಮೂಡುಗಿಳಿಯಾರು ಭಾಗಗಳಲ್ಲಿ ಮತ್ತೆ ನೆರೆ ಏರುವ ಭೀತಿ ಎದುರಾಗಿದೆ.ಈ ಎಲ್ಲಾ ಭಾಗಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ.
![]() |
| ಕೋಟ ಗ್ರಾ.ಪಂ ವ್ಯಾಪ್ತಿಯ ಮೂಡುಗಿಳಿಯಾರು ಸಂಪರ್ಕಿಸುವ ರಸ್ತೆ ಹಾಗೂ ಅಕ್ಕಪಕ್ಕ ಕೃಷಿಭೂಮಿ ನೆರೆ ನೀರಿನಿಂದ ತುಂಬಿದ್ದು |
![]() |
| ಕೋಟ ಗ್ರಾ.ಪಂ ವ್ಯಾಪ್ತಿಯ ಮೂಡುಗಿಳಿಯಾರು ಸಂಪರ್ಕಿಸುವ ರಸ್ತೆ ಹಾಗೂ ಅಕ್ಕಪಕ್ಕ ಕೃಷಿಭೂಮಿ ನೆರೆ ನೀರಿನಿಂದ ತುಂಬಿದ್ದು |

ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಮಲ್ಯಾಡಿ ಭಾಗದ ಮನೆ ಪುನಹ ನೆರೆಯಿಂದ ಆವೃತ್ತವಾಗಿರುವುದು



