ಆನೆಗುಡ್ಡೆ ದೇವಳ ಕೋವಿಡ್ ಮಾರ್ಗಸೂಚಿ-karavalivani,
ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಇಲ್ಲಿ ಕೋವಿಡ್ 19 ರ ನಿಯಮಾನುಸಾರ ರಾಜ್ಯ ಸರ್ಕಾರದ ತಾ-4/01/2022 ರ ಆದೇಶದಂತೆ ಶ್ರೀ ದೇವರ ದರ್ಶನಕ್ಕೆ ನಿಯಮಗಳನ್ನು ಜಾರಿಗೆ ತರಲಾಗಿದೆ
ಎರಡು ಬಾರಿ ಕೋವಿಡ್ ಲಸಿಕೆ ಪಡೆದ 50 ಜನರಂತೆ ಒಂದು ಬಾರಿ ಶ್ರೀ ದೇವರ ದರ್ಶನಕ್ಕೆ ಅವಕಾಶ.
ಹಣ್ಣು ಕಾಯಿ/ತೀರ್ಥ ಪ್ರಸಾದ ಹಾಗೂ ಯಾವುದೇ ಸೇವೆ ಸಲ್ಲಿಸಲು ಅವಕಾಶ ಇರುವುದಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಸಹಕರಿಸಬೇಕು ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಈ ನಿಯಮಗಳ ಪಾಲಿಸತಕ್ಕದ್ದು ಎಂದು ಶ್ರೀದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ
