Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕೋಟ- ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಕೋಟ ಇದರ ವತಿಯಿಂದ ವಿಶೇಷ ಪೂಜೆ+karavalivani

ಕೋಟ: ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಕೋಟ ಇವರ ವತಿಯಿಂದ ಶಬರಿಮಲೆ ಮಕರಜ್ಯೋತಿ ಹಿನ್ನಲೆಯಲ್ಲಿ ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಳದ ಒಲಗ ಮಂಟಪದಲ್ಲಿ ಅಯ್ಯಪ್ಪ ದೇವರ ಭಾವಚಿತ್ರ ಇರಿಸಿ ವಿಶೇಷ ಪೂಜಾ ಕಾರ್ಯಕ್ರಮ ನೆರವೆರಿಸಿದರು.
ಮಕರಜ್ಯೋತಿ ಬೆಳಗುವ ಸಂದರ್ಭದಲ್ಲಿ ದೇಳದ ಸುತ್ತಪೌಳಿ ಹಾಗೂ ಮರದ ಹಲಗೆ ಮೇಲೆ ಹಣತೆ ದೀಪವಿರಿಸಿ ಭಕ್ತರಿಂದ ಜ್ಯೋತಿ ಪ್ರಜ್ವಲಿಸಲಾಯಿತು.
ಉಡುಪಿಯ ಅಯ್ಯಪ್ಪ ಗುರುಸ್ವಾಮಿ ವಿಜಯ ಬನ್ನಂಜೆ ಯವರಿಂದ ಧಾರ್ಮಿಕ ಪೂಜಾ ಕಾರ್ಯ ನೆರವೆರಿಸಿದರು.
ಶಬರಿಮಲೆಯಂತೆ ಹದಿನೆಂಟು ಮೆಟ್ಟಿಲುಗಳಲು ಸೃಷ್ಠಿಸಿ ಪಡಿಪೂಜೆ ನೆರವೆರಿಸಿ ಶ್ರೀದೇವರಿಗೆ ಮಂಗಳಾರತಿ ನೆರವೆರಿಸಲಾಯಿತು.ಪೂಜಾ ಉಸ್ತುವಾರಿಯನ್ನು ಅಘೋರೇಶ್ವರ ಅಯ್ಯಪ್ಪ ಭಕ್ತವೃಂದದಿAದ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ನಂತರ ಶ್ರೀದೇವರ ಪ್ರಸಾದ ಹಾಗೂ ಪನ್ಯಾರಸೇವೆ ನಡೆಯಿತು.
ಈ ಸಂದರ್ಭದಲ್ಲಿ ಕೋಟ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಚಂದ್ರ ಪೂಜಾರಿ ಕದ್ರಿಕಟ್ಟು,ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಗೌರವಾಧ್ಯಕ್ಷ ಶ್ರೀಕಾಂತ್ ಶೆಣೈ,ಸಂಚಾಲಕ ಪ್ರದೀಪ್ ಪೂಜಾರಿ,ಗುರುಸ್ವಾಮಿಗಳಾದ ಸುರೇಶ್ ಮೇಸ್ತಿç,ಸಂತೋಷ್ ಪೂಜಾರಿ, ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ಶ್ಯಾಮಸುಂದರ್ ನಾಯರಿ, ರತ್ನನಾಗರಾಜ್ ಗಾಣಿಗ ಕಾರ್ಯಕಾರಿ ಸಮಿತಿ ಪ್ರದೀಪ್ ಶೆಟ್ಟಿ, ಶಶಿಧರ ಕುಂದರ್,ಶಿವರಾಮ ಬಂಗೇರ,ಜ್ಞಾನೇಶ್ ಆಚಾರ್ಯ, ಅಭಿಜಿತ್ ಕಾಂಚನ್, ,ಕೃಷ್ಣಮೂರ್ತಿ ಮರಕಾಲ,ಕೃಷ್ಣ ಆಚಾರ್ಯ, ಮಂಜುನಾಥ ನಾಯರಿ,ನಾರಾಯಣ ಗಿಳಿಯಾರು,ರಾಮಚಂದ್ರ ಐತಾಳ್,ಸಂತೋಷ್ ಪ್ರಭು,ಅಘೋರೇಶ್ವರ ಅಯ್ಯಪ್ಪ ಭಕ್ತವೃಂದದ ರಾಧಕೃಷ್ಣ ಬ್ರಹ್ಮಾವರ,ನಾಗರಾಜ್ ಐತಾಳ್, ಮತ್ತಿತರರು ಉಪಸ್ಥಿತರಿದ್ದರು

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close