ಅರಸಮ್ಮಕಾನು ಶೇಡಿಮನೆ ಶಾಲೆಯಲ್ಲಿ 10ನೇ ವರ್ಷದ ರಕ್ತದಾನ ಶಿಬಿರ ಉದ್ಘಾಟನೆ=-karavalivani,
ನವಶಕ್ತಿ ಯುವಕ ಮಂಡಲ ಅರಸಮ್ಮಕಾನು ಶೇಡಿಮನೆ ಅಭಯಹಸ್ತ, ಚಾರಿಟೇಬಲ್ ಟ್ರಸ್ಟ್ ಉಡುಪಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಸಮ್ಮಕಾನು- ಶೇಡಿಮನೆ ವಲಯ, ಲಯನ್ಸ್ ಕ್ಲಬ್ ಆರ್ಡಿ- ಬೆಳ್ವೆ ಗೋಳಿಯಂಗಡಿ, ಲಿಯೋ ಕ್ಲಬ್ ಯುವಶಕ್ತಿ ಸಂಯುಕ್ತ ಆಶ್ರಯದಲ್ಲಿ ರವಿವಾರ ಅರಸಮ್ಮಕಾನು ಶೇಡಿಮನೆ ಶಾಲೆಯಲ್ಲಿ 10ನೇ ವರ್ಷದ ರಕ್ತದಾನ ಶಿಬಿರ ನಡೆಯಿತು ಶಿಬಿರವನ್ನು ಈ ರಕ್ತದಾನ ಶಿಬಿರದಲ್ಲಿ ಗ್ರಾಮೀಣ ಭಾಗದಲ್ಲಿ ಸುಮಾರು 105 ಯೂನಿಟ್ ರಕ್ತ ಸಂಗ್ರಹಿಸಲಾಯಿತು, ಈ ಕಾರ್ಯಕ್ರಮವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಉದ್ಘಾಟಿಸಿದರು ,ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಡಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಯಾನಂದ ಪೂಜಾರಿ, ಬೆಳ್ವೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಪಟ್ಟಾಭಿರಾಮ ಭಟ್ಟ್ ,ಕೋಶಾಧಿಕಾರಿ ವಸಂತ ಶೆಟ್ಟಿ ಕೆ.ಎಂ.ಸಿ ಮಣಿಪಾಲದ ಡಾ| ಬೆಮ್ಯಾ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧಿಕಾರಿ ಸಂತೋಷ್ , ಅರಸಮ್ಮಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಉಪ್ಪೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಗಣೇಶ್ ಅರಸಮ್ಮಕಾನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಯುವಕ ಮಂಡಲದ ಉಪಾಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ ವಂದಿಸಿದರು
