Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ವಾರಂಬಳ್ಳಿ ಗ್ರಾಮ ಪಂಚಾಯತ್ ಹಾಗೂ ಪಶು ಸಂಗೋಪಾ ಇಲಾಖೆಯ ಸಹಯೋಗದೊಂದಿಗೆ ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ಬೀದಿ ನಾಯಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ-karavalivani

 


ಬೀದಿ ನಾಯಿಗಳ ಸಂಖ್ಯೆ ಹೆಚ್ಚುವುದನ್ನು ತಪ್ಪಿಸಲು ಹಾಗೂ ಅವುಗಳು ರೇಬಿಸ್‌ನಿಂದ ಮುಕ್ತವಾಗಿಸಲು  ಎಲ್ಲಾ ಗ್ರಾಮ ಪಂಚಾಯತಿಯವರು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್ ರೋಗನಿರೋಧಕ ಲಸಿಕಾ ಶಿಬಿರ ಏರ್ಪಡಿಸುವ ಅಗತ್ಯತೆ ಇದೆ. ಈ ಹಿಂದೆ ಕೋಟದಲ್ಲಿ   ನಾಯಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಎಂದು ಬ್ರಹ್ಮಾವರ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ್‌ಕುಮಾರ್ ಶೆಟ್ಟಿ ನುಡಿದರು. ಅವರು ನ.30ರಂದು ವಾರಂಬಳ್ಳಿ ಗ್ರಾಮ ಪಂಚಾಯತ್ ಹಾಗೂ ಪಶು ಸಂಗೋಪಾ ಇಲಾಖೆಯ  ಸಹಯೋಗದೊಂದಿಗೆ  ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ನಡೆದ ಬೀದಿ ನಾಯಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರದಲ್ಲಿ ಮಾತನಾಡಿದರು.

 ನಾಯಿಗಳಿಗೆ ಯಾವುದೇ ರೀತಿಯಲ್ಲೂ ಪೆಟ್ಟಾಗದ ಹಾಗೆ  ಅವುಗಳನ್ನು ಹಿಡಿದು ಶಸ್ತç ಚಿಕಿತ್ಸೆ ನೆರವೇರಿಸಿ ಎರಡು ದಿನಗಳ ಕಾಲ ಅವುಗಳನ್ನು ಆರೈಕೆ ಮಾಡಿ ಎಲ್ಲಿಂದ ಹಿಡಿದು ತಂದಿದ್ದೆವೋ ಅದೇ ಸ್ಥಳಕ್ಕೆ ಬಿಟ್ಟು ಬರಲಾಗುವುದು. ಸಂತಾನಹರಣ ಚಿಕಿತ್ಸೆಯಿಂದ ಅವುಗಳ ಸಂಖ್ಯೆ  ಹೆಚ್ಚುವುದು ತಪ್ಪಲಿದೆ ಎಂದರು.

ಈ ಸಂದರ್ಭ ವಾರಂಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಪೂಜಾರಿ, ಮಾಜಿ ಅಧ್ಯಕ್ಷ ನವೀನ್‌ಚಂದ್ರ ನಾಯಕ್,  ಮಾಜಿ ಸದಸ್ಯ ಎಸ್.ನಾರಾಯಣ, ಸದಸ್ಯರಾದ ನಿರಂಜನ್, ಪಿಡಿಓ ಫರ್ಜಾನ ಉಪಸ್ಥಿತರಿದ್ದರು.

ಪುಣೆಯ ಅನಿಮಲ್ ಪ್ರೊಟೆಕ್ಷನ್ ಮತ್ತು ವೆಲ್‌ಫೇರ್ ಸೊಸೈಟಿಯ ತಂಡದವರು 18 ಬೀದಿ ನಾಯಿಗಳನ್ನು ಹಿಡಿದರು. ನಂತರ ಅವುಗಳನ್ನು ಬ್ರಹ್ಮಾವರ ಪಶು ಆಸ್ಪತ್ರೆಯ ಹಳೆ ಕಟ್ಟಡಕ್ಕೆ ಸಾಗಿಸಿದ್ದು ಅಲ್ಲಿ ಕೇರಳದ ಡಾ. ಬಿಜುಪ್ರಸಾದ್ ಶಸ್ತ್ರಚಿಕಿತ್ಸೆ ನೆರವೇರಿಸಿದರು.  


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close