ಮುಹಮ್ಮದ್ ನಿಶಾನ್ ನಾಪತ್ತೆ karavalivani
ಕೋಟ : ಕೋಡಿ ಕನ್ಯಾನದ ನಾಸಿರ್ ಇವರ ಪುತ್ರ ಮುಹಮ್ಮದ್ ನಿಶಾನ್ (14) ಇವನು ಸ್ನೇಹಿತನ ಮನೆಗೆ ಹೋಗಿ ಅಲ್ಲಿಂದ ಕೋಟ ಪಡುಕರೆ ಎಂಬಲ್ಲಿಗೆ ಆಟ ಆಡಲು ಹೋಗುತ್ತೇನೆ ಎಂದು ಮನೆಯಿಂದ ಸೈಕಲ್‌ನಿಂದ ಹೊರಟು ಹೋದವನು ನಾಪತ್ತೆ ಘಟನೆ ಭಾನುವಾರ ನಡೆದಿದೆ .ಮಣೂರು ಪಡುಕೆರೆ ಹೈಸ್ಕೂಲ್‌ನಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಹುಡುಗ ಸುಮಾರು 4.5 ಅಡಿ ಎತ್ತರ, ಗೋದಿ ಬಣ್ಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ಬ್ಯಾರಿ ಭಾಷೆ ಮಾತನಾಡುತ್ತಾನೆ. ಎಲ್ಲಿಯಾದರೂ ಈ ಹುಡುಗನ ಬಗ್ಗೆ ಸುಳಿವು ಸಿಕ್ಕಿದಲ್ಲಿ ದಯವಿಟ್ಟು 9880897535 ಈ ನಂಬರಿಗೆ ಸಂಪರ್ಕಿಸಿ
ಈ ಹುಡುಗನ ನಾಪತ್ತೆ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
