Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕೋಟೇಶ್ವರ- ಹಲಸಂಗಿ ಗೆಳೆಯರ ಸಾಹಿತ್ಯಿಕ ಕೊಡುಗೆ ಕುರಿತು ವಿಶೇಷ ಉಪನ್ಯಾಸ karavalivani

ಕೋಟ: ಶ್ರೀ ಕಾಳಾವರ ವರದರಾಜ್ ಶೆಟ್ಟಿ ಎಂ. ಕಾಲೇಜು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ,ಕೋಟೇಶ್ವರ  ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಅವರ ಸಹಯೋಗದೊಂದಿಗೆ ನ.27ರಂದು  ಕಾಲೇಜಿನ ಸಭಾಭವನದಲ್ಲಿ ಹಲಸಂಗಿ ಗೆಳೆಯರ ಕುರಿತಾದ ವಿಶೇಷ ಕಾರ್ಯಕ್ರಮ ವನ್ನು ಏರ್ಪಡಿಸಲಾಯಿತು. 

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಡಾ.ಎಸ್. ಕೆ. ಕೊಪ್ಪಾರವರು ತಮ್ಮಪ್ರಾಸ್ತಾವಿಕ ನುಡಿಯಲ್ಲಿ ಆರ್ಥಿಕ ಶ್ರೀಮಂತಿಕೆಯ ಕೊರತೆಯ ನಡುವೆಯೂ ಸಾಹಿತ್ಯಕ, ಸಾಂಸ್ಕöÈತಿಕ ಶ್ರೀಮಂತಿಯ ಮೂಲಕ ಕರ್ನಾಟಕದಾದ್ಯಂತ ಚಿರ ಪರಿಚಿತರಾದ ಹಲಸಂಗಿ ಗೆಳೆಯರು ಪ್ರಾಥಮಿಕ ಶಿಕ್ಷಣಕ್ಕಿಂತ ಹೆಚ್ಚಿಗೆ ಓದಿದವರಲ್ಲ ಆದರೂ ಬಹು ಭಾಷೆಯ ಮೇಲೆ ಪ್ರಭುತ್ವ ಹೊಂದಿ, ಸಾಹಿತ್ಯ ಕೃಷಿ ಮಾಡಿದರೆಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಉದ್ಘಾಟನೆಗೈದು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ  ಡಾ. ಶ್ರೀಪಾದ ಶೆಟ್ಟಿ, ಜನರಿಂದ ಜನರಿಗಾಗಿ  ಜನರಿಗೋಸ್ಕರ ಹುಟ್ಟಿದ ಸಾಹಿತ್ಯವೇ ಜನಪದ ಸಾಹಿತ್ಯ, ಜನವಾಣಿ ಬೇರು ಕವಿವಾಣಿ ಹೂವು, ಜನಪದ ಸಾಹಿತ್ಯ ಸಂಪಾದನೆಯ ಪ್ರಥಮ ಮಟ್ಟದಲ್ಲಿ ಹಲಸಂಗಿ ಗಳೆಯರು ಪ್ರಕಟಿಸಿದ ಗರತಿಯ ಹಾಡು, ಜೀವನ ಸಂಗೀತ ಹಾಗೂ ಮಲ್ಲಿಗೆ ದಂಡ ಸಂಕಲನಗಳ ಹಲವಾರು ಹಾಡುಗಳೊಂದಿಗೆ ಕಲಸಂಗಿ ಗೆಳೆಯರ ಬಳಗ ಜನಪದ ಸಾಹಿತ್ಯಕ್ಕೆ ನೀಡಿದ ಕೊಡುಗೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು

ಕನ್ನಡ ನಾಡಿನ ಜನಪದ ಸಿರಿಯನ್ನು ಅನಾವರಣಗೊಳಿಸಿ ಕನ್ನಡಿಗಳಿಗೆ ಉಣ ಬಡಿಸಿದ ಶ್ರೇಯಸ್ಸು ಹಲಸಂಗಿ ಗೆಳೆಯರ ಬಳಗಕ್ಕೆ ಸಲ್ಲಬೇಕು,ನವೋದಯ ಕಾಲ ಘಟ್ಟ ನಿಜವಾಗಿ ಆರಂಭವಾದದ್ದೆ  ಹಲಸಂಗಿ ಗೆಳೆಯರಿಂದ ಹೊಸತತ್ವ,ಹೊಸ ಭಾಷ್ಯ,  ಹೊಸ  ಶಕ್ತಿಯಿಂದ ಹಲಸಂಗಿ ಗೆಳೆಯರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರು. ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ ಪಟ್ಟರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಕಾಳಾವರ ವರದರಾಜ್ ಶೆಟ್ಟಿ ಎಂ. ಕಾಲೇಜು ಸರಕಾರಿ ಪ್ರಥಮ ದರ್ಜೆ  ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ. ಎಸ್.ನಾಯಕ ಬದುಕಿನಲ್ಲಿ ತಾಳ್ಮೆ, ನಟನೆ, ಸಹಿಷ್ಣುತೆ ಹಾಗೂ ಪ್ರಾಮಣಿ ಕತೆಯನ್ನು ಅಳವಡಿಸಿ ಕೊಳ್ಳಬೇಕು. ಸಾಹಿತ್ಯ ಮತ್ತು ಸಂಗೀತದ ಸಾಂಗತ್ಯದಿAದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ನಮ್ಮ ಬೆಳವಣಿಗೆ ಕಾರಣರಾದವರನ್ನು ಎಂದಿಗೂ ಮರೆಯದೇ   ಸ್ಮರಿಸುವುದು ದೊಡ್ಡ ಗುಣ , ಆ ದೊಡ್ಡ ಗುಣವನ್ನು ಇಂದಿನ ಯುವ ಜನತೆ ಅಳವಡಿಸಿ ಕೊಳ್ಳಬೇಕು ಎಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ಅನುಷಾ ನಾಯಕ್, ಶಾಂಭವಿ ಹಾಗೂ ಅನುಷಾ ಕೊಠಾರಿ ಪ್ರಾರ್ಥನೆ ಗೈದರು. ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಗರಾಜ ಯು ಭಾವ ಗೀತೆಯ ಗಾಯನ ಮಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಕನ್ನಡ ಸಂಘದ ಸಂಚಾಲಕ  ಡಾ. ಉಷಾದೇವಿ ಜೆ.ಎಸ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪಂಜು  ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡ ಉಪನ್ಯಾಸಕರಾದ  ವರದರಾಜ ವಂದನಾರ್ಪಣೆ ಗೈದರು.



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close