Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ತೆಕ್ಕಟ್ಟೆ- ಮಲ್ಯಾಡಿಗೆ ಬಸ್ ತಂಗುದಾಣಕ್ಕೆ ಸ್ಥಳೀಯರ ಹಾಗೂ ವಿದ್ಯಾರ್ಥಿಗಳ ಆಗ್ರಹ karavalivani

 


ಕೋಟ: ಇಲ್ಲಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಲ್ಯಾಡಿ ಭಾಗದಲ್ಲಿ ಬಸ್ ತಂಗುದಾಣವಿಲ್ಲದೆ ಸಾರ್ವಜನಿಕರು ರಸ್ತೆಯಲ್ಲೆ ನಿಂತು ಅಪಾಯಕ್ಕೆ ಆಹ್ವಾನಿಸುವ ಸನ್ನಿವೇಶ ಕಳೆದ ಹಲವಾರು ವರ್ಷಗಳಿಂದ ಎದುರಾಗಿದೆ.

ಸಾಮಾನ್ಯವಾಗಿ ಸಿಟಿ ಪ್ರದೇಶದಿಂದ ಹಿಡಿದು ಗ್ರಾಮೀಣ ಹಳ್ಳಿಗಾಡಿನ ಹೆಚ್ಚಿನ  ಒಳ ಭಾಗಗಳ  ರಸ್ತೆಗಳಲ್ಲಿ ಬಸ್ ತಂಗುದಾಣಗಳನ್ನು ನೋಡುತ್ತೇವೆ ಆದರೆ ಇಲ್ಲಿನ ಮಲ್ಯಾಡಿ ಪ್ರದೇಶದಲ್ಲಿ ಸಾರ್ವಜನಿಕರಿಂದ ಹಿಡಿದು ಶಾಲಾ ಮಕ್ಕಳವರೆಗೆ ರಸ್ತೆಯ ಮೇಲೆ ನಿಂತು ಬಸ್ ಏರುವ ಸ್ಥಿತಿ ಅಪಾಯಕ್ಕೆ ಮುನ್ನುಡಿ ಬರೆಯುವಂತಿದೆ.ಈ ಬಗ್ಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ಕದ ತಟ್ಟಿದರೂ ಪ್ರಯೋಜನ ಶೂನ್ಯವೆಂಬತ್ತಾಗಿದೆ ಈ ಹಿನ್ನಲ್ಲೆಯನ್ನು ಮನಗಂಡ ಸ್ಥಳೀಯರು ಬಸ್ ತಂಗುದಾಣಕ್ಕಾಗಿ ಆಗ್ರಹಿಸಿದ್ದಾರೆ.


ಬಾರಿ ಪ್ರಮಾಣದ ವಾಹನ ಸಂಚಾರ 

ಈ ರಸ್ತೆಯಲ್ಲಿ ಸಾಮಾನ್ಯವಾಗಿ ಸಣ್ಣಪುಟ್ಟವಾಹನಗಳಿಗೆ ಸೀಮಿತಗೊಳ್ಳದೆ ಬಾರಿ ಪ್ರಮಾಣದ ಲಾರಿಗಳು ಸಂಚರಿಸುತ್ತವೆ ಅವುಗಳ ವೇಗಕ್ಕಂತು ಕಡಿವಾಣ ಇಲ್ಲದೆ ಸಂಚರಿಸುವAತ್ತಾಗಿದೆ ಹೀಗಿರುವಾಗ ಅಲ್ಲಿನ ಸ್ಥಳೀಯರು,ಶಾಲಾ  ಮಕ್ಕಳು ರಸ್ತೆಯಲ್ಲೆ ನಿಂತು ಬಸ್ ಏರುವ ಸ್ಥಿತಿ ಮುಂದಿನ ದಿನಗಳಲ್ಲಿ ಅಪಾಯಕ್ಕೆ ತಂದೊಡ್ಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಈ ಬಗ್ಗೆ ಸ್ಥಳೀಯರು, ಸ್ಥಳೀಯ ಸಂಘಸoಸ್ಥೆಗಳ ಹಾಗೂ ಜನಪ್ರತಿನಿಧಿಗಳಲ್ಲಿ  ಬಸ್ ತಂಗುದಾಣ ನಿರ್ಮಾಣಕ್ಕಾಗಿ ಮೊರೆಹೋಗಿದ್ದಾರೆ


ಈ ಪರಿಸರದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಜನರು  ಬಸ್ ಏರಲು ರಸ್ತೆಯಲ್ಲೆ ನಿಲ್ಲಬೇಕಾದ ಸ್ಥಿತಿ ಇದೆ ಒಂದೆಡೆ ಬಿಸಿಲಿನ ನಿಲ್ಲಬೆಕಾದ ಸ್ಥಿತಿಯಾದರೆ ಇನ್ನೊಂದೆಡೆ ರಭಸದಿಂದ ಬರುವ ಘನ ವಾಹನಗಳು ಭಾರಿ ಗಾತ್ರದ ಲಾರಿಗಳು ಚಲಿಸುವ ಹಿನ್ನಲ್ಲೆಯಲ್ಲಿ ಅಪಾಯತಂದೊಡ್ಡುವ ಸ್ಥಿತಿ ಎದುರಗಿದೆ ಈ ಹಿನ್ನಲ್ಲೆಯಲ್ಲಿ ಫಲಕಯುಕ್ತ ಬಸ್ ತಂಗುದಾಣ ಶೀಘ್ರದಲ್ಲಿ ನಿರ್ಮಿಸಲು ಆಗ್ರಹಿಸುತ್ತಿದ್ದೇನೆ
ಶ್ರೀನಿವಾಸ ಮಲ್ಯಾಡಿ ಸ್ಥಳೀಯ ನಿವಾಸಿ, ಮುಖಂಡರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ


ಈ ಭಾಗದಲ್ಲಿ ಬಸ್ ತಂಗುದಾಣವಿಲ್ಲದೆ ಬಾರಿ ಸಮಸ್ಯೆ ಎದುರಾಗಿದೆ ನಮ್ಮಂತ ವಿದ್ಯಾರ್ಥಿಗಳಿಗಂತು ಸರಕಾರಿ ಶಾಲೆಗೆ ತೆರಳಲು ಕಿಲೋಮಿಟರ್ ದೂರ ಕ್ರಮಿಸಬೇಕಾದ ಅನಿವಾರ್ಯತೆ ಇರುವುದರಿಂದ ಇಲ್ಲಿನ ಮಲ್ಯಾಡಿ ತಿರುವಿನ ರಸ್ತೆಯಲ್ಲಿ ನಿಂತು ಬಸ್ ಏರಬೇಕಾಗಿದೆ.ಸಮಘ ಸಂಸ್ಥೆಗಳು ಅಥವಾ ಸ್ಥಳೀಯಾಡಳಿತ,ಜನಪ್ರತಿನಿಧಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಬಸ್ ತಂಗುದಾಣ ನಿರ್ಮಿಸಿದರೆ ಭಾರಿ ಅನುಕೂಲವಗುತ್ತದೆ

ಪ್ರಥ್ವಿ  ಮಲ್ಯಾಡಿ 5ನೇ ತರಗತಿ ವಿದ್ಯಾರ್ಥಿ ತೆಕ್ಕಟ್ಟೆ ಕುವೆಂಪು ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close