Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕೋಟ ಪಂಚವರ್ಣ ಯುವಕ ಮಂಡಲದ ವತಿಯಿಂದ 98ನೇ ವಾರದ ಪರಿಸರಸ್ನೇಹಿ ಅಭಿಯಾನ karavalivani


ಕೋಟ: ಕೋಟ ಪಂಚವರ್ಣ ಯುವಕ ಮಂಡಲ ಇವರ ನೇತ್ರತ್ವದಲ್ಲಿ ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ 98ನೇ ಭಾನುವಾರದ ಸಂಭ್ರಮ ಆ ಪ್ರಯುಕ್ತ ಸ್ಥಳೀಯ ಯುವಕ ಮಂಡಲಗಳಾದ ಗಿಳಿಯಾರು ಯುವಕ ಮಂಡಲ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಮಣೂರು ಫ್ರೆಂಡ್ಸ್, ಯಕ್ಷ ಸೌರಭ ಕಲಾರಂಗ ಕೋಟ ,ಮಹಿಳಾ ಬಳಗ ಹಂದಟ್ಟು, ರಕ್ತೇಶ್ವರಿ ಬಳಗ ಪಾಂಡೇಶ್ವರ ,ಧರ್ಮಸ್ಥಳ ಗ್ರಾ.ಯೋ.ಪಾಂಡೇಶ್ವರ ಒಕ್ಕೂಟ ಹಾಗೂ ಸ್ಥಳೀಯರ  ಸಂಯೋಜನೆಯೊAದಿಗೆ  ಪಾಂಡೇಶ್ವರದ ತೀರ್ಥಬೈಲು ಶಂಕರನಾರಾಯಣ ದೇವಸ್ಥಾನ   ಸ್ವಚ್ಛಗೊಳಿಸುವ  ಅಭಿಯಾನ  ನಡೆಯಿತು.ಕಾರ್ಯಕ್ರಮಕ್ಕೆ  ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಚಾಲನೆ ನೀಡಿ ಮಾತನಾಡಿ  ಪ್ರಸ್ತುತ ಕಾಲಘಟ್ಡದಲ್ಲಿ ಪಕೃತಿಯನ್ನು ಹಾಳುಗೆಡವ ಮನಸ್ಥಿತಿ ಬಿಟ್ಟು ಅದನ್ನು ಆರಾಧಿಸುವ  ಮನೋಭಾವನೆ ಬೆಳಸಿಕೊಳ್ಳಬೇಕು ಅದು ಈ ಪ್ರಕೃತಿಗೆ ಈ ಮನುಷ್ಯ ಸಂಕುಲ ಕೊಡುವ ಬಹುದೊಡ್ಡ ಕೊಡುಗೆ ಈ ಮಾತು ಏಕೆ ಉಲ್ಲೇಖಿಸುತ್ತೇನೆ ಎಂದರೆ ಇಂದು ವಾತಾವರಣದಲ್ಲಿ ಎದುರಾಗುತ್ತಿರುವ ಏರುಪೇರು ಇದಕ್ಕೆ ನಾವುಗಳೇ ಕಾರಣಿಭೂತರು,ಮನುಷ್ಯರಾದ ನಮ್ಮಿಂದ ಈ ಪರಿಸರ ಸಂರಕ್ಷಿಸುವ ಕೆಲಸ ನಿರಂತರವಾಗಿಸುವುದರ ಜೊತೆಗೆ ಇಂಥಹ ಸ್ವಚ್ಛತಾ ಅಭಿಯಾನ ಇರಬಹುದು,ಗಿಡ ನಡಯವ ಕಾಯಕ ಇರಬಹುದು ಇಂತವುಗಳಿoದ ಪರಿಶುದ್ಧ ವಾತಾವರಣವಾಗಿಸಲು ಸಾಧ್ಯವಿದೆ.
ಈ ನಿಟ್ಟಿನಲ್ಲಿ ಆಯಾ ಭಾಗಗಳ ಯುವಕ ಮಂಡಲಗಳು ತಮ್ಮ ತಮ್ಮ ಪರಿಸರವನ್ನು ಕಾಯ್ದು ಶುಚಿಯಾಗಿರಿಸಿಕೊಂಡರೆ ಯಾವ ಪ್ರಾಕೃತಿಕ ವಿಕೋಪಗಳು ಸಂಭವಿಸದೆ ಮನುಷ್ಯ ಸೇರಿದಂತೆ ಚರಾಚರ ಜೀವಿಗಳನ್ನು ಉಳಿಸಲು ಸಹಕಾರಿಯಾಗುತ್ತದೆ.ದೇವಳಗಳ ಶುಚಿತ್ವದಿಂದ  ನಮ್ಮ ಮನಸ್ಸುಗಳು ಶುಭ್ರಗೊಳ್ಳುತ್ತದೆ.ಆ ಮೂಲಕ ದೇವರು ನಮ್ಮಲ್ಲಿಯೇ ಕಾಣಲು ಸಾಧ್ಯವಾಗುತ್ತದೆ.ಎಂದು ಐತಿಹಾಸಿಕ ಭೂತಾಳಪಾಂಡ್ಯನ ಆಳ್ವಿಕೆಯಲ್ಲಿ ಸೃಷ್ಠಿಯಾದ ಈ ದೇವದ ಶುಚಿತ್ವ ಕಾರ್ಯದಲ್ಲಿ ಕೈಜೋಡಿಸಿದ ಯುವಕ ಮಂಡಲಗಳಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಶಂಕರನಾರಾಯಣ ದೇವಳದ ಮುಕ್ತೇಸರ ರಘುರಾಮ್ ಭಟ್,ರಕ್ತೇಶ್ವರ ಬಳಗ ಪಾಂಡೇಶ್ವರ ಇದರ ಅಧ್ಯಕ್ಷ ನಾರಾಯಣ ಆಚಾರ್ಯ,ಧ.ಗ್ರಾ.ಯೋಜನೆ ಪಾಂಡೇಶ್ವರ ವಲಯ ಸೇವಾ ಪ್ರತಿನಿಧಿ ಅಕ್ಷಯ,ಪಾಂಡೇಶ್ವರ ಒಕ್ಕೂಟದ ಅಧ್ಯಕ್ಷೆ ಸೀಮಾ,ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಉಪಾಧ್ಯಕ್ಷ ಮನೋಹರ್ ಪೂಜಾರಿ,ಯಕ್ಷ ಸೌರಭ ಕಲಾ ರಂಗ ಕೋಟ ಇದರ ಸತ್ಯನಾರಾಯಣ ಆಚಾರ್ಯ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ,ಐರೋಡಿ ಗೋಳಿಬೆಟ್ಟು ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರು, ರಕ್ತೇಶ್ವರಿ ಬಳಗದ ಪದಾಧಿಕಾರಿಗಳು,ದೇವಳದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close