ಯಶಸ್ವೀ-25, ಸಾಂಸ್ಕೃತಿಕ ನಿಧಿಗಾಗಿ ಸಾಧನೆಯ ಮಜಲುಗಳು ಅನಾವರಣ:ಕೈೂಕೂರು ಸೀತಾರಾಮ ಶೆಟ್ಟಿ karavalivani
ತೆಕ್ಕಟ್ಟೆ, ನ. 24: ಯಶಸ್ವೀ ಕಲಾವೃಂದ ಕಳೆದ ಇಪ್ಪನ್ನಾಲ್ಕು ಹರಯದ ಸಾಧನೆಯ ವಿವಿಧ ಮಜಲುಗಳನ್ನು ನರ‍್ಮಡಿಯಾಗಿಸುವುದಕ್ಕೆ ಕಾತುರತೆಯಿಂದ ಕಾದಿದೆ. ಆರ್ಥಿಕವಾಗಿ ಬಡತನ ಹೊಂದಿದ ಸಂಸ್ಥೆ ಸಾಧನೆಯ ಪಥದಲ್ಲಿ ಶ್ರೀಮಂತವಾಗಿದೆ. ವಿಶಿಷ್ಠ ಕಾರ್ಯಕ್ರಮವನ್ನು ನೆರವೇರಿಸಿ, ದೇಶ ವಿದೇಶಗಳಲ್ಲಿ ಭಾರೀ ಸುದ್ಧಿ ಮಾಡಿದ ಸಂಸ್ಥೆ ಯಶಸ್ವೀ ಕಲಾವೃಂದ. ಇಪ್ಪತ್ತ ಮೂರನೇ ವಯಸ್ಸಿನಲ್ಲಿ ಒಂದಷ್ಟು ಕನಸನ್ನು ತುಂಬಿಕೊ0ಡು ಇಪ್ಪತ್ತ ನಾಲ್ಕನೇ ಹರಯಕ್ಕೆ ಕಾದಿದೆ. 24ರಿಂದ 25ರ ತನಕ ವರ್ಷವಿಡೀ ವಾರಾತ್ಯದ ಕಾರ್ಯಕ್ರಮವನ್ನು ಏರ್ಪಡಿಸಿ ಕೊನೇಯ ಒಂದು ತಿಂಗಳನ್ನು ಪ್ರತೀ ನಿತ್ಯ ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಿಸಲು “ಸಾಂಸ್ಕೃತಿಕ ನಿಧಿ” ಸಂಗ್ರಹಣೆಗಾಗಿ ನಾಂದಿ ಹಾಡಿದೆ ಎಂದು ತೆಕ್ಕಟ್ಟೆ ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ, ಯಕ್ಷಗುರು ಸೀತಾರಾಮ ಶೆಟ್ಟಿ ಕೈೂಕೂರು ಅಭಿಪ್ರಾಯಪಟ್ಟರು.
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನವೆಂಬರ್ 24ರಂದು “ಸಾಂಸ್ಕೃತಿಕ ನಿಧಿ” ಹಳೇ ವರ್ಷದ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಸಾಧನೆಯ ಮಜಲುಗಳನ್ನು ಬರೆದ ಕರ ಪತ್ರವನ್ನು ಅನಾವರಣ ಮಾಡಿ ಕೈೂಕೂರು ಮಾತನಾಡಿದರು.
ಡಿಸೆಂಬರ್ 11ರಂದು ಯಕ್ಷಕಾಶಿ ಕುಂದಾಪುರದಲ್ಲಿ ಸಾಲಿಗ್ರಾಮ ಮೇಳದ ಯಕ್ಷಗಾನ ‘ಧರ್ಮಾಧರ್ಮ ಸಂಘರ್ಷ’ ಸಾಂಸ್ಕೃತಿಕ ನಿಧಿ ಸಂಗ್ರಹಣೆಗಾಗಿ ಕಾರ್ಯಕ್ರಮ ಆಯೋಜಿಸಿಕೊಂಡು “ಯಶಸ್ವೀ-25”ಕ್ಕೆ ಛಾಲನೆ ನೀಡಿದ್ದಾರೆ. ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಹೆರಿಯ ಮಾಸ್ಟರ್, ಉಪನ್ಯಾಸಕ ರಾಘವೇಂದ್ರ ತುಂಗ, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ, ಕಲಾವಿದ ಕೀರ್ತನ್ ಮಿತ್ಯಂತ ಹಾಲಾಡಿ, ಹರೀಷ್ ಕಾವಡಿ, ವಿಶ್ವಂಬರ ಅಲ್ಸೆ ಉಪಸ್ಥಿತರಿದ್ದರು. ಕಾರ್ಯದರ್ಶಿ ವೆಂಕಟೇಶ ವೈದ್ಯ ಸ್ವಾಗತಿಸಿ, ಪ್ರಶಾಂತ್ ಮಲ್ಯಾಡಿ ನಿರೂಪಣೆ ಮಾಡಿದರು.
