Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಎಳವೆಯಲ್ಲಿಯೇ ಸಾಹಿತ್ಯ ಪ್ರೇರಣೆ ಅಗತ್ಯ: ಉನ್ನತಿ ಹಂದಟ್ಟು

ಎಳವೆಯಲ್ಲಿಯೇ ಸಾಹಿತ್ಯ ಪ್ರೇರಣೆ ಅಗತ್ಯ: ಉನ್ನತಿ ಹಂದಟ್ಟು 



ಕೋಟ: ಮಕ್ಕಳ ಸಾಹಿತ್ಯ ಸಮ್ಮೇಳನದಿಂದ ಎಳವೆಯಲ್ಲಿಯೇ ಸಾಹಿತ್ಯದ ಆಸಕ್ತಿಯನ್ನು ಮೂಡಿಸಬಹುದು ಮತ್ತು ಸಾಹಿತ್ಯದ ಹೆಮ್ಮರ ವಿಶಾಲವಾಗಿ ಅರಳಲು ಸಮ್ಮೇಳನ ಪೂರಕವಾಗುತ್ತದೆ ಇಂಥ ಸಮ್ಮೇಳದ ತೀರ ಅಗತ್ಯವಿದೆ ಸಾಂಸ್ಕöÈತಿಕ ಮನಸ್ಸಿನಿಂದ ಸಮಾಜ ಪ್ರಗತಿಯತ್ತ ಸಾಗುತ್ತದೆ ಎಂದು ಕುಮಾರಿ ಉನ್ನತಿ ಹಂದಟ್ಟು ನುಡಿದರು.
 ಅವರು ಕೋಟದ ಕಾರಂತ ಪ್ರತಿಷ್ಠಾನ , ಕೋಟತಟ್ಟು ಗ್ರಾಮ ಪಂಚಾಯತ್, ವೇಣುಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಬಾರ್ಕೂರು, ಗೀತಾನಂದ ಪೌಂಡೇಶನ್ ಮಣೂರು, ಉಸಿರು ಮತ್ತು ನೆನಪು ಕೋಟ ಇವರ ಆಸರೆಯಲ್ಲಿ ನಡೆದ ಐದನೇ ಮಕ್ಕಳ ಸಾಹಿತ್ಯ ಸಮ್ಮೇಳದಲ್ಲಿ ಸಮ್ಮೇಳನ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.
 ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಆನಂದ ಸಿ ಕುಂದರ್, ಅತಿಥಿಗಳಾದ ಗಣೇಶ್ ಜಿ ,ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್‌ಬಾರಿಕೆರೆ, ಟ್ರಸ್ಟಿಗಳಾದ ಸುಶೀಲಾ ಸೋಮಶೇಖರ್, ಬಾಲ ನಟಿ ಸಮೃದ್ಧಿ  ಮೊದಲಾದವರು ಉಪಸ್ಥಿತರಿದ್ದರು.
 ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರೆ, ಜೊತೆ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ನಿರೂಪಿಸಿ ವಂದಿಸಿದರು. ಬಳಿಕ ವಿವಿಧ ಗೋಷ್ಠಿಗಳು ನಡೆದವು.


ಕೋಟದ ಕಾರಂತ ಪ್ರತಿಷ್ಠಾನ , ಕೋಟತಟ್ಟು ಗ್ರಾಮ ಪಂಚಾಯತ್, ವೇಣುಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಬಾರ್ಕೂರು, ಗೀತಾನಂದ ಪೌಂಡೇಶನ್ ಮಣೂರು, ಉಸಿರು ಮತ್ತು ನೆನಪು ಕೋಟ ಇವರ ಆಸರೆಯಲ್ಲಿ ನಡೆದ ಐದನೇ ಮಕ್ಕಳ ಸಾಹಿತ್ಯ ಸಮ್ಮೇಳದಲ್ಲಿ ಕುಮಾರಿ ಉನ್ನತಿ ಹಂದಟ್ಟು ಸಮ್ಮೇಳನ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಆನಂದ ಸಿ ಕುಂದರ್, ಅತಿಥಿಗಳಾದ ಗಣೇಶ್ ಜಿ ,ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್‌ಬಾರಿಕೆರೆ ಇದ್ದರು.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close