Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಇಬ್ಬರು ಅರೆಸ್ಟ್..!!

 ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ  ಇಬ್ಬರು ಅರೆಸ್ಟ್..!!

ದಿನಾಂಕ: 29-11-2025 ರಂದು ಬೆಳಗ್ಗೆ, ಯಾರೋ ಕಳ್ಳರು ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುವ ವೇಳೆಯಲ್ಲಿ, ಸದ್ರಿ ವಾಹನ ರಸ್ತೆಯಲ್ಲಿ ಕೆಟ್ಟುಹೋಗಿರುವುದರಿಂದ ವಾಹನದಲ್ಲಿದ್ದ ಗೋವುಗಳನ್ನು ಪುತ್ತೂರು, ನರಿಮೊಗರು ಎಂಬಲ್ಲಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದು ಅವುಗಳನ್ನು ಸ್ಥಳೀಯರ ಸಹಕಾರದಿಂದ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ ಘಟನೆ ನಡೆದಿದ್ದು.

ಗೋವುಗಳನ್ನು ಯಾರೋ ಕಳ್ಳರು ಕದ್ದು ತಂದಿರಬಹುದೆಂದು ಸಂಶಯವಿದ್ದು, ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪಾಣಾಜೆ ನಿವಾಸಿ ಪ್ರೇಮ್ ರಾಜ್ ನೀಡಿದ ದೂರಿನಂತೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 117/2025, ಕಲಂ: 4, 5 12 ಕರ್ನಾಟಕ ಜಾನುವಾರು ಹತ್ಯೆ : 303(1) BNS 2023 5 106 BNSS-2023 d ಪ್ರಕರಣ ದಾಖಲಾಗಿರುತ್ತದೆ.


ಸದ್ಯ ಪ್ರಕರಣದ ತನಿಖೆ ನಡೆಸಲಾಗಿ, ಆರೋಪಿಗಳಾದ ಉಳ್ಳಾಲ ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ (26) ಹಾಗೂ ಅಬ್ದುಲ್ ಲತೀಫ್ (25) ಎಂಬವರುಗಳು ಕೆಎ 52 4889 ನೋಂದಣಿಯ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 4 ಕರುಗಳನ್ನು ಹಾಗೂ ಒಂದು ದನವನ್ನು ಸಾಗಿಸುವ ವೇಳೆ ವಾಹನ ದುರಸ್ತಿಗೀಡಾದ್ದರಿಂದ, ಆರೋಪಿಗಳು ಸದ್ರಿ ಜಾನುವಾರುಗಳನ್ನು ರಸ್ತೆಯಲ್ಲಿ ಬಿಟ್ಟು ವಾಹನದೊಂದಿಗೆ ತೆರಳಿರುವುದು ತಿಳಿದುಬಂದಿರುತ್ತದೆ. ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close