ಧರ್ಮಸ್ಥಳ ದ ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ? - webnews kannada
ಧರ್ಮಸ್ಥಳ ದ ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ? - webnews kannada
ಧರ್ಮಸ್ಥಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿರುವ ಎಸ್ಐಟಿ ತಂಡದ ದಿನದ ಖರ್ಚಿನ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ.
ಮಂಗಳೂರು, ಆಗಸ್ಟ್ 13: ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ದೂರುದಾರ ತೋರಿಸಿದ ಜಾಗವನ್ನೆಲ್ಲಾ ಎಸ್ಐಟಿ (SIT) ತಂಡ ಅಗೆಯೋ ಕೆಲಸ ಮಾಡುತ್ತಿದೆ. ಕಳೆದ 13 ದಿನಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿರುವ ಎಸ್ಐಟಿ ತಂಡದ ದಿನದ ಖರ್ಚಿನ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ. ಎಸ್ಐಟಿ ತನಿಖೆಗೆ ನಿತ್ಯ ಅಂದಾಜು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದೆ.
ಎಸ್ಐಟಿ ತನಿಖೆಗೆ ಲಕ್ಷಾಂತರ ರೂ ಖರ್ಚು
ಕಳೆದ 13 ದಿನಗಳಿಂದಲೂ ಅಸ್ಥಿಪಂಜರಕ್ಕಾಗಿ ಎಸ್ಐಟಿ ಶೋಧ ನಡೆಸಿದೆ. ನೇತ್ರಾವತಿ ನದಿ ತಟ, ಬಂಗ್ಲಗುಡ್ಡ, ಕಲ್ಲೇರಿ, ರತ್ನಗಿರಿ ಬೆಟ್ಟದಲ್ಲೂ ಶವ ಶೋಧ ಮಾಡಲಾಗಿದೆ. 6ನೇ ಪಾಯಿಂಟ್ ಬಿಟ್ಟು ಬೇರೆ ಯಾವ ಸ್ಪಾಟ್ನಲ್ಲೂ ಅಸ್ಥಿಪಂಜರ ಪತ್ತೆ ಆಗಿಲ್ಲ. ಆದರೆ ಈ ಮಧ್ಯೆ ತನಿಖೆಗೆ ಮಾತ್ರ ನಿತ್ಯ ಲಕ್ಷಾಂತರ ರೂ ಖರ್ಚಾಗುತ್ತಿದೆ



.jpg)
