ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ವಿ. ಸೋಮಣ್ಣ?
WebNews Kannada
19 ಜುಲೈ, 2025
ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ವಿ. ಸೋಮಣ್ಣ?
ಬಿ.ವೈ. ವಿಜಯೇಂದ್ರ ನಾಯಕತ್ವಕ್ಕೆ ಬಿಜೆಪಿ ಭಿನ್ನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ವಿ. ಸೋಮಣ್ಣ ನೇಮಕಗೊಳ್ಳುವ ಸಾಧ್ಯತೆಗಳಿವೆ. ಮುಂದಿನ ವಾರ ಇದು ಬಹುತೇಕ ನಿರ್ಧಾರವಾಗಲಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನನ್ನಿಂದಲೇ ಎಲ್ಲವೂ ಎಂಬ ಭಾವನೆ ಬದಿಗಿರಿಸಬೇಕು ಎಂದು ವಿ. ಸೋಮಣ್ಣ ಹೇಳಿಕೆ ನೀಡಿದ್ದು, ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ. ಯತ್ನಾಳ್ ಸಹ ಸೋಮಣ್ಣ ನೇಮಕಕ್ಕೆ ವಿರೋಧ ಇಲ್ಲ ಎಂದಿದ್ದಾರೆ.

